ಬೆಂಗಳೂರು: ದಸರಾ ಲೈಟಿಂಗ್ (Dasara Lightings) ಅನ್ನು 10 ದಿನಗಳ ಕಾಲ ಮುಂದುವರಿಸುವ ಯೋಜನೆ ಇದೆ. ಸದ್ಯದಲ್ಲಿಯೇ ಈ ಬಗ್ಗೆ ಘೋಷಣೆಯಾಗಲಿದೆ’ ಎಂದು ಸಿಎಂ ಡಿಕೆಶಿ (DK Shivakumar) ಮಾಹಿತಿ ನೀಡಿದರು.
ದಸರಾ ಲೈಟಿಂಗ್ ನೋಡುವುದಕ್ಕಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಇದನ್ನು ಮತ್ತಷ್ಟು ದಿನ ವಿಸ್ತರಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಸರಾಕ್ಕೆ ವಿಜಯನಗರ ಕಾಲದಿಂದ ಅರಸು ಕಾಲದ ತನಕ ಇತಿಹಾಸ ಇದೆ. ಕಂಬಳ ಕದ್ರಿ ಮಂಜುನಾಥ ದೇವರಿಗಾಗಿ ಶುರುಮಾಡಿದ್ದು. ವಿಜಯನಗರ ಕಾಲದಿಂದಲೂ ಕೋಣಗಳಿಗೆ ಗೌರವ ಕೊಡುವ ಪದ್ಧತಿ ಇದೆ. ಚಾಮುಂಡಿಗೆ ತೆಂಗಿನ ಕಾಯಿ ಹೊಡೀತಿವಲ್ಲ. ಆ ಕಾಯನ್ನು ಕಂಬಳಕ್ಕೆ ಬಹುಮಾನವಾಗಿ ನೀಡುತ್ತಿದ್ದರು. ಈಗ ಚಿನ್ನದ ನಾಣ್ಯ ಕೊಡುತ್ತಾರೆ. ಅದನ್ನು ಮಾರಾಟ ಮಾಡುವುದಿಲ್ಲ. ಮದುವೆಗೆ ದಾನವಾಗಿ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರೈಲು ಪ್ರಯಾಣದ ವೇಳೆ ಜೋರಾಗಿ ಹಾಡು ಹಾಕಿದ್ರೆ 6 ತಿಂಗಳು ಜೈಲು
ಕೋಣಗಳನ್ನು ಸಾಕುವುದಕ್ಕೆ 15ರಿಂದ 20 ಲಕ್ಷ ಖರ್ಚು ಮಾಡುತ್ತಾರೆ. ಮಕ್ಕಳಂತೆ ಪೋಷಣೆ ಮಾಡುತ್ತಾರೆ. ಕಂಬಳ ನಡೆಸಲು 3 ಸಾವಿರ ಜನ ಬಂದಿದ್ದಾರೆ. ಲಕ್ಷಾಂತರ ಜನ ನೋಡಿದ್ದಾರೆ. ನಾವು ದಸರಾದಲ್ಲಿ ಹೊಸ ಪರಂಪರೆ ಪ್ರಾರಂಭ ಮಾಡಿದ್ದೇವೆ. ಹೊಸದಾಗಿ ನಾವು ಏರ್ ಶೋ ಆರಂಭಿಸಿದ್ದೇವೆ. ಯುವ ದಸರಾ ಮಾಡಿ ಹೊರಗಡೆ ರಾಜ್ಯದವರನ್ನು ಕರೆದು ಲಕ್ಷಾಂತರ ಜನ ಯುವಕರಿಗೆ ಮನೋರಂಜನೆಯನ್ನು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಪ್ರಿಯಕರನಿಗಾಗಿ ಗಂಡನ ಬಲಿ ಪಡೆದ ಪತ್ನಿ – ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್
ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು, ತುಮಕೂರು ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿ ಹೀಗೆ ರಾಜ್ಯದ ಎಲ್ಲಾ ಕಡೆ ದಸರಾ ನಡೆಯುತ್ತಿದೆ. ಇದು ನಮ್ಮ ದೇಶದ ಸಂಸ್ಕೃತಿ. ಕಲೆ, ಸಾಹಿತ್ಯ ನಮ್ಮ ಆಸ್ತಿ. ಇದನ್ನು ಉಳಿಸುವುದಕ್ಕೆ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಬೇಕು. ಈ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಲೋಕಭವನದಲ್ಲಿ ಆಯುಧ ಪೂಜೆ: ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲೆ ಸುಧಾ ಯಾದವ್
