ವಿಜಯಪುರ: ಪ್ರಿಯಕರನಿಗಾಗಿ ಗಂಡನ ಬಲಿ ಪಡೆದು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಅಪ್ರಾಪ್ತ ಸೇರಿ ನಾಲ್ವರನ್ನು ಅರೆಸ್ಟ್ ಮಾಡಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.
ಮೃತನನ್ನು 42 ವರ್ಷದ ರಾಜಶೇಖರ್ ಬಿರಾದಾರ್ ಹಾಗೂ ಬಂಧಿತ ಆರೋಪಿಗಳನ್ನು ಮೃತನ ಪತ್ನಿ ಅಶ್ವಿನಿ ಬಿರಾದಾರ (30), ಪ್ರಿಯಕರ ಆನಂದ್ ಕಲ್ಲೂರ್ (25), ಸಚಿನ್ ಬಡಳ್ಳಿ (24) ಹಾಗೂ ಓರ್ವ ಅಪ್ತಾಪ್ರ ಬಾಲಕ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಲೋಕಭವನದಲ್ಲಿ ಆಯುಧ ಪೂಜೆ: ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲೆ ಸುಧಾ ಯಾದವ್
ದಂಪತಿಗೆ ಅವಳಿ ಗಂಡು ಮಕ್ಕಳು. ಆದ್ರೂ ಅವರಿಬ್ಬರ ಸಂಸಾರದಲ್ಲಿ ಬಿರುಕಿತ್ತು. ಅಷ್ಟರಲ್ಲೇ ಆಕೆಗೊಬ್ಬ ಪರಿಚಯವಾದ. ಆತನಿಂದಲೇ ಗಂಡನನ್ನ ಪರಲೋಕಕ್ಕೆ ಕಳಿಸಿ, ಇದೀಗ ಜೈಲು ಪಾಲಾಗಿದ್ದಾಳೆ.
ಕಳೆದ ಆ.4ರಂದು ವಿಜಯಪುರ ನಗರದ ಹೊರಭಾಗದ ಚಿದಂಬರ ದೇವಸ್ಥಾನದ ರಸ್ತೆಯಲ್ಲಿ ಅಪಘಾತವಾದ ರೀತಿಯಲ್ಲಿ ರಾಜಶೇಖರ್ ಅವರ ಮೃತದೇಹ ಪತ್ತೆಯಾಗಿರುತ್ತು. ಬೆಳಿಗ್ಗೆ ವಾಯುವಿಹಾರಕ್ಕೆ ಹೋದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ್ದರು ಎನ್ನಲಾಗಿತ್ತು. ಈ ಸಂಬಂಧ ಅವರ ಪತ್ನಿ ಅಶ್ವಿನಿ ಬಿರಾದಾರ್ ದೂರು ಸಹ ನೀಡಿದ್ದರು. ದೂರು ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿಟಿವಿ ಪರಿಶೀಲನೆ ಮಾಡಿದಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ಹಾಗೂ ಬೈಕ್ ಹೋಗಿರುವುದು ಪತ್ತೆಯಾಗಿದೆ. ಆಗ ಬೈಕ್ ಸವಾರನನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಕಹಾನಿ ಹೊರಬಿದ್ದಿದೆ. ಇದು ಅಪಘಾತವಲ್ಲ ಕೊಲೆ. ಹೆಂಡತಿಯೇ ಇದರ ಮಾಸ್ಟರ್ ಮೈಂಡ್ ಎನ್ನುವುದು ಬಯಲಿಗೆ ಬಂದಿದೆ.ಇದನ್ನೂ ಓದಿ: Manipur Violence | ನಾಲ್ವರ ಹತ್ಯೆ – ಸಿಎಂ ಮನೆ ಮುಂದೆ ಶವಗಳನ್ನಿಟ್ಟು ಪ್ರತಿಭಟನೆ
ವಿಜಯಪುರದ ಏಕತಾ ನಗರದಲ್ಲಿ ವಾಸವಾಗಿದ್ದ ಮೃತ ರಾಜಶೇಖರ ಸಂಬಂಧಿಯಾಗಿದ್ದ ಅಶ್ವಿನಿಯನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದ. 6 ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಕುಟುಂಬದಲ್ಲಿ ಆಗಾಗ ಸಣ್ಣಪುಟ್ಟ ಗಲಾಟೆ ನಡೆಯುತ್ತಿದ್ದವು. ಇದರ ನಡುವೆ 7 ತಿಂಗಳ ಹಿಂದೆ ಇದೇ ಏರಿಯಾದಲ್ಲಿ ರಾಜಶೇಖರ್ ಹೊಸ ಮನೆ ಕಟ್ಟಿಸಿದ್ದು, ಮನೆ ಪೇಂಟಿಂಗ್ ಕೆಲಸವನ್ನು ಆನಂದ ಕಲ್ಲೂರ ಎಂಬಾತನಿಗೆ ಕೊಟ್ಟಿದ್ದ. ಈತ ಪೇಂಟಿಂಗ್ ಕೆಲಸಕ್ಕೆ ಬರುವಾಗ ಅಶ್ವಿನಿ ಪರಿಚಯವಾಗಿ ಸ್ನೇಹವಾಗಿದೆ. ಹಲವು ದಿನಗಳ ಬಳಿಕ ಅಶ್ವಿನಿ ತನ್ನ ಗಂಡನಿಂದ ಬಿಡುಗಡೆ ಬಯಸಿ, ಆತನ ಕೊಲೆ ಮಾಡುವ ಬಗ್ಗೆ ಪೇಂಟರ್ ಆನಂದ್ಗೆ ಹೇಳಿದ್ದು, ಇದಕ್ಕೆ ಜೋಡಿಸಿದ್ದಾನೆ.
ಕೊಲೆ ನಡೆದಿದ್ದು ಹೇಗೆ?
ಆಗಸ್ಟ್ 4ರಂದು ಮುಂಜಾನೆ 5:30ಗಂಟೆ ಸುಮಾರಿಗೆ ರಾಜಶೇಖರ್ ತನ್ನ ಮನೆಯಿಂದ ಜುಮನಾಳ್ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದ. ಈ ವಿಷಯವನ್ನು ಅಶ್ವಿನಿಯು ತನ್ನ ಪ್ರಿಯಕರ ಆನಂದ್ಗೆ ಮಾಹಿತಿ ನೀಡಿದ್ದಳು. ಈ ವೇಳೆ ತನ್ನ ಬೈಕ್ ಮೇಲೆ ಬಂದ ಆನಂದ್ ರಾಜಶೇಖರನನ್ನು ಹಿಂಬಾಲಿಸಿ, ತನ್ನ ಸಹಚರರು ಜೊತೆಗೆ ಸೇರಿ ಕೊಲೆ ಮಾಡಲು ಹೊಂಚು ಹಾಕಿದ್ದ. ಆನಂದ್ ಸೂಚನೆಯಂತೆ ನಂಬರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ತೆಗೆದುಕೊಂಡು ಬಂದ ಸ್ನೇಹಿತರು ರಸ್ತೆ ಮೇಲೆ ಹೊರಟಿದ್ದ ರಾಜಶೇಖರ್ಗೆ ಡಿಕ್ಕಿ ಹೊಡೆದು, ಕೊಲೆ ಮಾಡಿ ಪರಾರಿಯಾಗಿದ್ದರು.ಇದನ್ನೂ ಓದಿ:ಅಲ್ಬೇನಿಯಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ – ಸುಪ್ರೀಂ ಕೋರ್ಟ್, ಸರ್ಕಾರಿ ಕಚೇರಿಗೆ ಬೆಂಕಿ
ಘಟನಾ ಸ್ಥಳಕ್ಕೆ ಬಂದಿದ್ದ ಪತ್ನಿ ಹಾಗೂ ಕುಟುಂಬಸ್ಥರು ಗೋಳಾಡಿ ಅತ್ತಿದ್ದರು. ಆದರೆ ಹೆಂಡತಿಯ ಇದರ ರೂವಾರಿ ಅನ್ನೋದು ತನಿಖೆಯ ಬಳಿಕ ಹೊರಬಿದ್ದಿದೆ. ಸದ್ಯ ಪೊಲೀಸರ ತನಿಖೆಯಿಂದ ನಿಜಾಂಶ ಬಯಲಾಗಿದೆ. ಗಂಡನ ಕೊಲೆ ಮಾಡಿಸಿದ ಹೆಂಡತಿ ಹಾಗೂ ಆಕೆಯೆ ಪ್ರಿಯಕರ ಅಂದರ್ ಆಗಿದ್ದಾರೆ.ಇದನ್ನೂ ಓದಿ: ಗಗನ್ಗೆ ಈಗ ಸೇಹ್ನದ ಸವಾಲ್ – ಸೌಂದರ್ಯ, ತಾಂಡವ್ ಪೈಕಿ ಯಾರಾಗ್ತಾರೆ ನಾಮಿನೇಟ್?
