– ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ
ಬೆಂಗಳೂರು: ಕಬ್ಬು ಬೆಳೆಗಾರರ (Sugarcane Farmers) ವಿಚಾರವಾಗಿ ಪ್ರಧಾನಿಗಳಿಗೆ (Narendra Modi) ಪತ್ರ ಬರೆದಿದ್ದೇನೆ. ಅವರಿಂದ ಪ್ರಯೋಜನವಾಗುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹಿತ ಕಾಪಾಡಲು ನಾನು ಪ್ರಯತ್ನ ಪಟ್ಟಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಯತ್ನ ಪಟ್ಟು, ಕೊನೆಗೆ ಮತ್ತೆ ಕಾಂಗ್ರೆಸ್ ಮೇಲೆ ಹಾಕಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಈಗ ಏನು ಮಾತನಾಡುವುದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ; ರೈತರ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ
ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ
ನನಗೆ ಈ ವಿಚಾರವಾಗಿ ರಾಜಕಾರಾಣ ಮಾಡೋಕೆ ಇಷ್ಟ ಇಲ್ಲ. ರೈತರ ಹತ್ತಿರ ಏನು ರಾಜಕಾರಣ ಮಾಡ್ತೀರಾ? ರಾಜಕಾರಣ ಮಾಡೋಕೆ ಬೇರೆ ಜನ ಇದ್ದಾರೆ. ಅವರು ಮಾಡುತ್ತಾರೆ. ಅವರು ಟೀಕೆ ಮಾಡುತ್ತಿರಲಿ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳ ಭೇಟಿ
ಮುಂದಿನ ವಾರ ಬರದ ವಿಚಾರವಾಗಿ ಪ್ರಧಾನಿಗಳಿಗೆ ಮನವಿಯನ್ನು ಸಲ್ಲಿಸುತ್ತೀರಾ ಎಂದು ಕೇಳಿದಾಗ, ಹೌದು, ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಗಳನ್ನು ಭೇಟಿಯಾಗಿ ಮನವಿಯನ್ನು ಮಾಡುತ್ತೇವೆ. ವಿರೋಧ ಪಕ್ಷದವರೂ ಕೂಡ ನಮ್ಮ ಜೊತೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಈಗ ಏಕೆ ಸುಮ್ಮನೆ ಇದ್ದೀನಿ ಎಂದರೆ, ಬರಗಾಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ಕಡೆ ಇದೆ. ದಸರಾ ಮುಗಿದು ರಾಜ್ಯೋತ್ಸವದ ನಡುವೆ ಮಧ್ಯದಲ್ಲಿ ಪ್ರಧಾನಿಗಳು ಸಮಯ ಕೊಟ್ಟರೆ ಹೋಗಿ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ:ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಗಾಗಿ ಭುಗಿಲೆದ್ದ ಆಕ್ರೋಶ: ಶಾಸಕ ಗವಿಯಪ್ಪ ಮನೆ ಮುಂದೆ ಉಪವಾಸ ಸತ್ಯಾಗ್ರಹ
