ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ರೈತ ಮುಖಂಡರ (Farmers Protest) ಜೊತೆ ನಡೆಸಿದ ಸಭೆಯಲ್ಲಿ, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಕಬ್ಬು (Dharwad) ಬೆಳೆಗಾರರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಹುಬ್ಬಳ್ಳಿಯ ಅತಿಥಿ ಗೃಹದಲ್ಲಿ ಮಧ್ಯರಾತ್ರಿ ನಡೆದ ಸಭೆಯ ನಂತರ ರೈತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಕಳೆದ ಐದು ದಿನಗಳಿಂದ ನಡೆಸಿದ ಪಾದಯಾತ್ರೆ ಇಂದು ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಸಭೆಯ ಮೂಲಕ ರೈತರ ಮನವೊಲಿಸುವಲ್ಲಿ ಸಜಿವ ಪ್ರಹ್ಲಾದ್ ಜೋಶಿ ಯಶಸ್ವಿಯಾಗಿದ್ದಾರೆ. ಸಮಿತಿಯ ವರದಿ ಆಧರಿಸಿ ಸಿಹಿಸುದ್ದಿ ನೀಡುವ ಭರವಸೆಯನ್ನು ಸಚಿವರು ರೈತರಿಗೆ ನೀಡಿದ್ದಾರೆ.
ಸಭೆಯ ನಂತರ ಹುಬ್ಬಳ್ಳಿಯಲ್ಲಿ ರೈತ ಮುಖಂಡರು ಹಾಗೂ ಬಿಜೆಪಿ ಶಾಸಕರ ಜಂಟಿ ಸುದ್ದಿಗೊಷ್ಠಿಯಲ್ಲಿ ಪ್ರಹ್ಲಾದ್ ಜೋಶಿ ಮಾತನಾಡಿ, ರೈತ ಮುಖಂಡರ ನಿಯೋಗ, ಬೆಳಗಾವಿ, ಧಾರವಾಡ ಜಿಲ್ಲಾಧಿಕಾರಿಗಳು, ಪೊಲೀಸರು ಅಧಿಕಾರಿಗಳ ಜೊತೆ ಸಭೆ ಆಗಿದೆ. ರೈತರ ಬೇಡಿಕೆ ವಿಚಾರದಲ್ಲಿ ನಾವು ಅತ್ಯಂತ ಪಾಸಿಟಿವ್ ಆಗಿ ಇದ್ದೇವೆ. ಸಭೆಯಲ್ಲಿನ ತೀರ್ಮಾನಕ್ಕೆ ರೈತರು ಸಹಮತ ವ್ಯಕ್ತಪಡಿಸಿದ್ದಾರೆ. ನಾನು, ಜಗದೀಶ್ ಶೆಟ್ಟರ್ ಮತ್ತು ಇತರೆ ನಾಯಕರು ರೈತರು ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದೇವೆ. ಸಭೆಯಲ್ಲಿ ರೈತರು ನಮ್ಮ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸಮಿತಿ ವರದಿ ಆಧರಿಸಿ ರೈತರ ಬೇಡಿಕೆ ಈಡೇರಿಕೆಗೆ ನಮ್ಮ ಸರ್ಕಾರ ಬದ್ಧ ಎಂದು ಭರವಸೆ ನೀಡಿದ್ದಾರೆ.ಇದನ್ನೂ ಓದಿ: 6 ತಿಂಗಳ ವಿಧವಾ, ವೃದ್ಧಾಪ್ಯ ವೇತನ ಬಾಕಿ; ಸರ್ಕಾರದ ವಿರುದ್ಧ ಫಲಾನುಭವಿಗಳ ಅಸಮಾಧಾನ
ಸಭೆಯ ನಂತರ ರೈತ ಮುಖಂಡ ಚೂನ್ನಪ್ಪ ಪೂಜಾರ ಮಾತನಾಡಿ, ಸಭೆಯಲ್ಲಿ ಕೇಂದ್ರ ಸಚಿವರು ಮತ್ತು ಉಳಿದ ನಾಯಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಕಾಲಾವಕಾಶ ಕೇಳಿದ್ದಾರೆ. ಸಭೆಯಲ್ಲಿ ಪಾಸಿಟಿವ್ ಅಭಿಪ್ರಾಯ ವ್ಯಕ್ತವಾಗಿದೆ. ಈಗಾಗಲೇ ಕಬ್ಬು ಕಟಾವಿಗೆ ಬಂದಿದೆ. ಶೀಘ್ರದಲ್ಲೇ ನಿರ್ಧಾರ ತಗೆದುಕೊಳ್ಳವುದಾಗಿ ಹೇಳಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಹೋರಾಟ ಇದ್ದದ್ದೆ. ಆದರೆ, ತಾತ್ಕಾಲಿಕವಾಗಿ ಹೋರಾಟ ಕೈ ಬಿಡುತ್ತೇವೆ. ಈ ನಿರ್ಣಯವನ್ನು ಉಳಿದ ರೈತರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ದಸರಾ ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸಿಎಂ ಆಫರ್
