ನೈಪಿಡಾವ್: ಇಲ್ಲಿನ ರಖೈನ್ (Rakhine) ರಾಜ್ಯದ ಕ್ಯೌಕ್ತಾವ್ (Kyauktaw) ಟೌನ್‌ಶಿಪ್‌ನಲ್ಲಿರುವ ಮಾರುಕಟ್ಟೆಯ ಸಮೀಪ ಮ್ಯಾನ್ಮಾರ್ ಮಿಲಿಟರಿ ನಡೆಸಿದ ವಾಯುದಾಳಿಯಲ್ಲಿ 49 ಜನರು ಸಾವನ್ನಪ್ಪಿದ್ದು, 58 ಜನರು ಗಾಯಗೊಂಡಿದ್ದಾರೆ.
ಮಾಹಿತಿ ಪ್ರಕಾರ, ಸೋಮವಾರ (ಸೆ.28) ಮಧ್ಯಾಹ್ನ ಸ್ಥಳೀಯ ಮಾರುಕಟ್ಟೆಯ ಬಳಿ ಫೈಟರ್ ಜೆಟ್ ಎರಡು ಬಾಂಬ್‌ಗಳನ್ನು ಸ್ಫೋಟಿಸಿದ್ದು, ಈ ದಾಳಿಯಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 58 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ರಖೈನ್‌ನ ಹಿರಿಯ ರಕ್ಷಣಾ ಅಧಿಕಾರಿಯಾದ ವಾಯ್ ಹುನ್ ಆಂಗ್ (Wai Hun Aung) ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಎಇ ಪರೀಕ್ಷೆಯಲ್ಲೂ ಅಕ್ರಮ? – ಅನುಮಾನಕ್ಕೆ ಎಡೆ ಮಾಡಿಕೊಟ್ಟ ಕನ್ನಾಳೆಯ ಸೀಕ್ರೆಟ್ ಡೈರಿ
ವಾಯದಾಳಿಯ ಕೆಲ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹಾನಿಗೊಳಗಾದ ವಾಹನಗಳು, ಕಟ್ಟಡಗಳು ಕಂಡುಬಂದಿವೆ. ಈ ಘಟನೆಯ ಬಗ್ಗೆ ಮ್ಯಾನ್ಮಾರ್ ಮಿಲಿಟರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಿಲಿಟರಿಯು ಉದ್ದೇಶಪೂರ್ವಕವಾಗಿ ವಾಯುದಾಳಿಗಳನ್ನು ನಡೆಸಿದೆ ಎಂದು ಅರಾಕನ್ ಆರ್ಮಿ ಆರೋಪಿಸಿದೆ.
ಇನ್ನೂ ಇಂದು (ಸೆ.29) ಮುಂಜಾನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಾಮೂಹಿಕ ಸಾವುನೋವುಗಳಿಗೆ ಕಾರಣರಾದ, ಉದ್ದೇಶಪೂರ್ವಕ ವಾಯುದಾಳಿಗಳಿಗೆ ನೇರವಾಗಿ ಕಾರಣರಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಿಳಿಸಿದೆ.ಇದನ್ನೂ ಓದಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಭೂಕಂಟಕ – ಜಮೀನು ಕಬಳಿಕೆ ಆರೋಪದಡಿ FIR
ಈ ಮಾರುಕಟ್ಟೆಯು ಈ ಪ್ರದೇಶದ ಮುಖ್ಯ ಸಗಟು ಕೇಂದ್ರವಾಗಿದ್ದು, ರಖೈನ್ ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಮತ್ತು ಖರೀದಿದಾರರನ್ನು ಆಕರ್ಷಿಸುತ್ತದೆ. ಇದು ರಖೈನ್‌ನಲ್ಲಿ ನಡೆದ ಅತ್ಯಂತ ಗಂಭೀರ ವಾಯುದಾಳಿಗಳಲ್ಲಿ ಒಂದಾಗಿದೆ. ಈ ಟೌನ್‌ಶಿಪ್ ಅನ್ನು ದೇಶದ ಅತ್ಯಂತ ಶಕ್ತಿಶಾಲಿ ಜನಾಂಗೀಯ ಸಶಸ್ತ್ರ ಸಂಸ್ಥೆಗಳಲ್ಲಿ ಒಂದಾದ ಅರಾಕನ್ ಆರ್ಮಿ (Arakan Army) ನಿಯಂತ್ರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕಲಬುರಗಿ | ಕತ್ತು ಹಿಸುಕಿ ಗಂಡನಿಂದಲೇ ಹೆಂಡತಿಯ ಕೊಲೆ

