ಕಲಬುರಗಿ: ಪತ್ನಿಯ ಶೀಲ ಶಂಕಿಸಿ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಶರಣಶಿರಸಗಿ ಬಳಿ ನಡೆದಿದೆ.
ರೇಣುಕಾ ಶಿಂಧೆ (38) ಕೊಲೆಯಾದ ಮಹಿಳೆ. ಕಳೆದ ಕೆಲ ವರ್ಷಗಳ ಹಿಂದೆ ಸಂಜಯ್ ಜೊತೆ ಮದುವೆಯಾಗಿ ಶರಣಸಿರಸಗಿ ಬಳಿ ವಾಸವಾಗಿದ್ದರು. ರೇಣುಕಾ ಪರ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಆಕೆಯ ಪತಿ ಸಂಜಯ್ ಅನುಮಾನ ಪಡುತ್ತಿದ್ದ. ಈ ಕುರಿತು ಇಬ್ಬರ ನಡುವೆ ಹಲವು ಬಾರಿ ಜಗಳ ಕೂಡ ನಡೆದಿತ್ತು.
ನಿನ್ನೆ ರಾತ್ರಿ ಸಹ ಇಬ್ಬರ ನಡುವೆ ಇದೇ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ರೇಣುಕಾಳ ಕತ್ತು ಹಿಸುಕಿ ಗಂಡ ಕೊಲೆ ಮಾಡಿದ್ದಾನೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

