ಲಕ್ನೋ: ಉತ್ತರ ಪ್ರದೇಶದ (Uttar Pradesh) ಪ್ರಮುಖ ಧಾರ್ಮಿಕ ಗುರು ಪ್ರೇಮಾನಂದ ಮಹಾರಾಜರ (Sant Premanand Maharaj) ಶಿಷ್ಯರೊಬ್ಬರು ಮಥುರಾದ ವೃಂದಾವನದಲ್ಲಿರುವ (Vrindavan) ಕಟ್ಟಡವೊಂದರ 4ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಾವಿನ ಬಗ್ಗೆ ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.
ದೀಪಕ್ ಲೋಧಿ (Deepak Lodhi) ಸಾವನ್ನಪ್ಪಿದ ವ್ಯಕ್ತಿ. ಕಟ್ಟಡದಿಂದ ಬಿದ್ದು, ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಬದುಕುಳಿಯಲಿಲ್ಲ. ಘಟನೆಯ ನಂತರ ವೃಂದಾವನ ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಲವ್ವರ್ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರ
ದೀಪಕ್ ಅವರು ಪ್ರೇಮಾನಂದ ಮಹಾರಾಜರ ಆಶ್ರಮದ ಹಿಂಭಾಗದಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ಒಂದೂವರೆ ವರ್ಷದಿಂದ ವಾಸಿಸುತ್ತಿದ್ದರು. ಮೂಲತಃ ಜಬಲ್‌ಪುರದವರಾಗಿದ್ದ ದೀಪಕ್ ಅವರನ್ನು ‘ರಸಿಕ್ ದುಲಾರಿ ಶರಣ್’ ಎಂದು ಸಹ ಕರೆಯಲಾಗುತ್ತಿತ್ತು.
ಅವರ ಸಾವಿನ ಬಗ್ಗೆ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಾಲ್ಕನಿಯಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

