– ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಹತ್ಯೆ ಮಾಡಿದ ಮಗ
ಚಂಡೀಗಢ: ನಿನಗಿನ್ನೂ 18 ವರ್ಷ. ನಿನ್ನ ಲವ್ವರ್‌ನ ಮದುವೆ ಆಗೋಕೆ 21 ವಯಸ್ಸಾಗುವವರೆಗೆ ಕಾಯಿ ಎಂದು ಬುದ್ದಿಮಾತು ಹೇಳಿದ ತಂದೆಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.
ಚಂಡೀಗಢ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ನನ್ನು ಅವರ ಹದಿಹರೆಯದ ಮಗನೇ ಮನೆಯೊಳಗೆ ಗುಂಡಿಕ್ಕಿ ಕೊಂದಿದ್ದಾನೆ. ತನ್ನ ಲವ್ವರ್ ಮದುವೆಯಾಗಲು 21 ವರ್ಷ ವಯಸ್ಸಾಗುವವರೆಗೆ ಕಾಯುವಂತೆ ಪುತ್ರನಿಗೆ ತಂದೆ ಬುದ್ದಿಮಾತು ಹೇಳಿದ್ದರು. ಇದನ್ನೂ ಓದಿ: ಚಿನ್ನಾಭರಣ, ನಗದು ವಿಡಿಯೋ ಮಾಡಿ ಹರಿಬಿಟ್ಟ ರೀಲ್ಸ್ ರಾಣಿ ಮನೆಗೆ ಕನ್ನ!
ಪೊಲೀಸ್ ಪ್ರಧಾನ ಕಚೇರಿಯ ಲೆಕ್ಕಪತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತಿನ್ ಸಿಂಗ್, ತಮ್ಮ 18 ವರ್ಷದ ಮಗ ಅರ್ಮಾನ್ ಜೊತೆ ಮದುವೆ ವಿಚಾರಕ್ಕೆ ವಾಗ್ವಾದ ನಡೆದಿತ್ತು. ಅದಾದ ಮಾರನೇ ದಿನವೇ ತಂದೆಯನ್ನು ಪುತ್ರ ಕೊಲೆ ಮಾಡಿದ್ದಾರೆ. ಸೆಕ್ಟರ್ 22ರಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ತಲೆಗೆ ಗುಂಡೇಟು ಬಿದ್ದ ಸ್ಥಿತಿಯಲ್ಲಿ ಸಿಂಗ್ ಮೃತದೇಹ ಪತ್ತೆಯಾಗಿತ್ತು.
ಘಟನಾ ಸ್ಥಳದಿಂದ ದೇಶೀಯ ನಿರ್ಮಿತ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದಂತೆ, ಇದೀಗ ಬಂಧನಕ್ಕೊಳಗಾಗಿರುವ ಅರ್ಮಾನ್, ತನ್ನ ತಾಯಿಯ ಕುತ್ತಿಗೆಯನ್ನು ಹಿಡಿದು ಅವರನ್ನೂ ಕೊಲ್ಲಲು ಪ್ರಯತ್ನಿಸಿದ್ದ. ಆದರೆ, ತಾಯಿ ತಪ್ಪಿಸಿಕೊಂಡು ಮನೆಯ ಮೇಲ್ಛಾವಣಿಗೆ ಓಡಿಹೋಗಿ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: AI ಕ್ಯಾಮೆರಾ ಯಡವಟ್ಟು – ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲ ಅಂತ ದಂಡ
ಅರ್ಮಾನ್ ತನ್ನ ಗೆಳತಿಯನ್ನು ಮದುವೆಯಾಗಲು ಪೋಷಕರ ಮೇಲೆ ಒತ್ತಡ ಹಾಕಿದ್ದ. ಆದರೆ, ಭಾರತದಲ್ಲಿ ಪುರುಷರ ಮದುವೆಗೆ ನಿಗದಿತ ಕಾನೂನುಬದ್ಧ ವಯಸ್ಸಾದ 21 ವರ್ಷ ತುಂಬುವವರೆಗೆ ಕಾಯುವಂತೆ ಪೋಷಕರು ತಿಳಿಹೇಳಿದ್ದರು. ಮದುವೆಗಾಗಿ ಆತ ತನ್ನ ತಂದೆಯಿಂದ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.

