ಬೆಂಗಳೂರು: ಟ್ರಾಫಿಕ್ ರೂಲ್ಸ್ (Traffic Rules) ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ (AI Camera) ಯಡವಟ್ಟೊಂದನ್ನು ಮಾಡಿದೆ. ಸ್ಕೂಟಿಯಲ್ಲಿ ಕೊಂಡೊಯ್ಯಲಾಗುತ್ತಿದ್ದ ಗಿಟಾರ್ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದೆ.
ಸೌವಿಕ್ ದತ್ತ ಎಂಬುವವರು ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ (Hebbal) ಟಿನ್ ಫ್ಯಾಕ್ಟರಿಗೆ (Tin Factory) ಕಡೆಗೆ ಹೊರಟಿದ್ದರು. ಈ ವೇಳೆ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಎಐ ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯ ಎಂದುಕೊಂಡು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದೆ. ಇದನ್ನೂ ಓದಿ: ಬಾಲ್ಕನಿಯಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು
ಆನ್‌ಲೈನ್‌ನಲ್ಲಿ ಬೈಕ್ ಸವಾರನಿಗೆ ಫೋಟೋ ಸಮೇತ ಚಲನ್ ರವಾನೆಯಾಗಿದೆ. ಫೋಟೋ ನೋಡಿ ಬೈಕ್ ಸವಾರ ಶಾಕ್ ಆಗಿದ್ದು, ಎಐ ಕ್ಯಾಮೆರಾ ಮಾಡಿದ ಯಡವಟ್ಟನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸದ್ಯ ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.ಇದನ್ನೂ ಓದಿ: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಗೇಟ್ ಬಂದ್ – ಜಿ.ಪಂ ಸಿಇಒ ಕ್ಲಾಸ್

