– 2 ದಿನದ ಹಿಂದಷ್ಟೇ ರೋಪ್ ಸ್ಕಿಪ್ಪಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಬಾಲಕಿ
ಲಕ್ನೋ: ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಬಾಲ್ಕನಿಗೆ ತೆರಳಿದ್ದ ವಿದ್ಯಾರ್ಥಿನಿ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಘಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಪ್ರಾಚಿ ಎಂದು ಗುರುತಿಸಲಾಗಿದೆ. ಪ್ರಾಚಿ ಸಂಜಯ್ ನಗರದಲ್ಲಿರುವ ಡೆಹ್ರಾಡೂನ್ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ರಾಜ್‌ನಗರ ಎಕ್ಸ್ಟೆನ್ಶನ್‌ನ ನಿವಾಸಿಯಾಗಿದ್ದ ಪ್ರಾಚಿ ಸಾಯುವ ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಸಿಬಿಎಸ್‌ಸಿ ರೋಪ್ ಸ್ಕಿಪ್ಪಿಂಗ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದಳು. ಇದನ್ನೂ ಓದಿ: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಗೇಟ್ ಬಂದ್ – ಜಿ.ಪಂ ಸಿಇಒ ಕ್ಲಾಸ್
ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ರಾಜ್‌ನಗರ ಎಕ್ಸ್ಟೆನ್ಶನ್‌ನ ರಾಜನಗರ ರೆಸಿಡೆನ್ಸಿ ಸೊಸೈಟಿಯ ಟವರ್ ಜಿನಲ್ಲಿ ಘಟನೆ ನಡೆದಿದೆ. ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಪ್ರಾಚಿ 12ನೇ ಮಹಡಿಯ ಬಾಲ್ಕನಿಗೆ ತೆರಳಿದ್ದಳು. ಈ ವೇಳೆ ಆಕೆ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಪ್ರಾಚಿ ಕೆಳಗೆ ಬಿದ್ದ ಶಬ್ದ ಕೇಳಿದ ಕೂಡಲೇ ಸೊಸೈಟಿಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಆಕೆಯನ್ನು ಸಮೀಪದ ಯಶೋದಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪ್ರಾಚಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ | ಹಳೇ ಹೆದ್ದಾರಿ ತಡೆದು ರೈತರ ಪ್ರತಿಭಟನೆ – ಪೊಲೀಸರೊಂದಿಗೆ ವಾಗ್ವಾದ; ಕಟ್ಟೆಯೊಡೆದ ಆಕ್ರೋಶ
ಘಟನೆ ಕುರಿತು ಮಾಹಿತಿ ಪಡೆದ ನಂದಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕುಟುಂಬಸ್ಥರಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಅನುಮತಿಯಿಲ್ಲದಿದ್ದರೂ ಡಿಜೆ ಬಳಕೆ ಆರೋಪ – 15 ಮಂದಿ ವಿರುದ್ಧ FIR
ನAದಗ್ರಾಮ ಪೊಲೀಸ್ ಠಾಣೆಗೆ ರಾತ್ರಿ 9 ಗಂಟೆ ಸುಮಾರಿಗೆ ಮಾಹಿತಿ ಬಂದಿದ್ದು, ರಾಜನಗರ ರೆಸಿಡೆನ್ಸಿ ಸೊಸೈಟಿಯ 12ನೇ ಮಹಡಿಯಿಂದ ಸುಮಾರು 14 ವರ್ಷದ ಬಾಲಕಿ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿತ್ತು ಎಂದು ಸಹಾಯಕ ಪೊಲೀಸ್ ಆಯುಕ್ತ ಜಿಯಾವುದ್ದೀನ್ ಅಹ್ಮದ್ ತಿಳಿಸಿದ್ದಾರೆ. ಘಟನೆ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವು
ಇನ್ನೊಂದೆಡೆ, ಪ್ರಾಚಿ ಇತ್ತೀಚೆಗೆ ಮಹಾರಾಷ್ಟ್ರದಿಂದ ಎರಡು ಚಿನ್ನದ ಪದಕಗಳೊಂದಿಗೆ ಮನೆಗೆ ಮರಳಿದ್ದಳು. ಶಿರಡಿಯಲ್ಲಿ ನಡೆದ ಅಃSಇ ರೋಪ್ ಸ್ಕಿಪ್ಪಿಂಗ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ `ಡಬಲ್ ಡಚ್ ಪೇರ್ ಫ್ರೀಸ್ಟೈಲ್’ ಮತ್ತು `ಡಬಲ್ ಡಚ್ ಸಿಂಗಲ್ ಫ್ರೀಸ್ಟೈಲ್’ ವಿಭಾಗಗಳಲ್ಲಿ ಆಕೆ ಚಿನ್ನದ ಪದಕ ಗೆದ್ದಿದ್ದಳು. ಇದನ್ನೂ ಓದಿ: Asian Games | ಕಬಡ್ಡಿಯಲ್ಲಿ ಚಿನ್ನದ ಗರಿ – ಭಾರತೀಯ ವನಿತೆಯರ ಚಿನ್ನದ ಬೇಟೆ
ಮಗಳ ಸಾಧನೆಯಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣವಿತ್ತು. ಘಟನೆ ನಡೆದ ವೇಳೆ ಪ್ರಾಚಿಯ ತಂದೆ-ತಾಯಿ, ಕಿರಿಯ ಸಹೋದರಿ ಹಾಗೂ ಅಜ್ಜ-ಅಜ್ಜಿ ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ. ಪ್ರಾಚಿಯ ತಂದೆ ಸುರೇಶ್ ಚಂದ್ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ತಕ್ಕ ಬೆಲೆ ತೆರಲೇಬೇಕು – ಪಾಕ್ ಪ್ರಧಾನಿಗೆ ಭಾರತ ತರಾಟೆ

