– ಪೊಲೀಸರ ವಿರುದ್ಧ ವಿಹೆಚ್‌ಪಿ ಮುಖಂಡರ ಆಕ್ರೋಶ
ಹಾಸನ: ಹಿಂದೂ ಮಹಾಗಣಪತಿ (Hindu Mahaganapathi) ವಿಸರ್ಜನಾ ಮಹೋತ್ಸವ ವೇಳೆ ಹಾಸನದಲ್ಲಿ ಅನುಮತಿ ನೀಡದಿದ್ದರು ಡಿಜೆ (DJ) ಬಳಸಿದ ಕಾರಣ ಹದಿನೈದು ಜನರ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲು ಮಾಡಿರುವ ಪೊಲೀಸರ ವಿರುದ್ಧ ವಿಹೆಚ್‌ಪಿ (VHP) ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲ್, ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ನಾವು ಕೂಡ ನೋಡಿದ್ದೇವೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ನಡೆದಾಗ ಅಲ್ಲಿಗೆ ಪರಿಸರ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಡೆಸಿಬಲ್ ಚೆಕ್ ಮಾಡಿಸುವ ತಾಕತ್ ಅನ್ನು ಪೊಲೀಸರು ಪ್ರದರ್ಶಿಸಬೇಕು. ಅಲ್ಲಿ ಎಫ್‌ಐಆರ್ ದಾಖಲು ಮಾಡ್ತಾರಾ? ಐಪಿಎಲ್ ಆಯೋಜಕರು 124 ಡೆಸಿಬಲ್ ರೀಚ್ ಆಯ್ತು ಅಂಥ ಆಯೋಜಕರು ತೋರಿಸುತ್ತಾರೆ. ಅವರ ಮೇಲೆ ಕೇಸ್ ದಾಖಲು ಮಾಡ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: Asian Games | ಕಬಡ್ಡಿಯಲ್ಲಿ ಚಿನ್ನದ ಗರಿ – ಭಾರತೀಯ ವನಿತೆಯರ ಚಿನ್ನದ ಬೇಟೆ
ಬೇರೆ ಬೇರೆ ಪ್ರಾರ್ಥನಾಲಯದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಕಾನೂನು ಮೀರಿ ಅನೌನ್ಸ್ ಮಾಡುತ್ತಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಿದೆಯಾ? ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ನಗರದಲ್ಲಿ ಹೆಚ್ಚಾಗಿದೆ ಏಕೆ ಕ್ರಮ ಕೈಗೊಂಡಿಲ್ಲ? ಎಂಟು ತಿಂಗಳ ಹಿಂದೆ ಅನ್ಯಧರ್ಮಿಯರ ಹಬ್ಬದ ದಿನ ರಾತ್ರಿ ಒಂದು ಗಂಟೆಯಲ್ಲಿ ಕೆ.ಆರ್.ಪುರಂನಲ್ಲಿ ಜೋರಾಗಿ ಲೌಡ್ ಸ್ಪೀಕರ್ ಹಾಕಿದ್ದರು. ಎಲ್ಲಾ ಇಲಾಖೆಯ ಪ್ರಮುಖ ಅಧಿಕಾರಿಗಳಿಗೆ ಫೋನ್ ಮಾಡಿದ್ದೆ. ಸಾಮರಸ್ಯ ದೃಷ್ಟಿಯಿಂದ ಅನುಸರಿಸಿಕೊಳ್ಳಿ. ಹಾಸನ ಜಿಲ್ಲೆಯ ಸಾಮರಸ್ಯ ದೃಷ್ಟಿಯಿಂದ ಇದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಈಗ ಅಧಿಕಾರಿಗಳಿಗೆ ಸಾಮರಸ್ಯ ನೆನಪಾಗುತ್ತಿಲ್ವಾ? ಸತ್ತು ಹೋಗಿದೆಯಾ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಭಯೋತ್ಪಾದನೆಗೆ ತಕ್ಕ ಬೆಲೆ ತೆರಲೇಬೇಕು – ಪಾಕ್ ಪ್ರಧಾನಿಗೆ ಭಾರತ ತರಾಟೆ
ಹೈಕೋರ್ಟ್‌ನಲ್ಲಿ ಇದನ್ನು ಚಾಲೆಂಜ್ ಮಾಡುತ್ತೇವೆ. ನಾಲ್ಕು ಎಫ್‌ಐಆರ್ ದಾಖಲು ಮಾಡಿರುವುದು ಖಂಡನೀಯ. ಕೇವಲ ಗಣೇಶೋತ್ಸವ ಟಾರ್ಗೆಟ್ ಮಾಡಬೇಡಿ. ಪರಿಸರದ ಮೇಲೆ ಕಾಳಜಿ ಇದ್ದರೆ 365 ಪ್ರದರ್ಶನ ಮಾಡಿ. ಕೇವಲ ಗೌರಿ-ಗಣೇಶ ಹಬ್ಬದಲ್ಲಿ ನಿಮ್ಮ ಕಾಳಜಿ ತೋರಿಸಬೇಡಿ. ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ಉಪಯೋಗವಾಗುವ ದೃಷ್ಟಿಯಿಂದ ನಿಯಮಗಳನ್ನು ಮಾಡಿ. ಹಿಂದೂ ಸಮಾಜದ ಒಂದೆರಡು ಆಚರಣೆಗಳಿಗೆ ವಿನಾಯಿತಿ ಕೊಡಿ. ನಿಮ್ಮ ಕೇಸ್ ಅನ್ನು ನಾವು ಚಾಲೆಂಜ್ ಮಾಡುತ್ತೇವೆ. ಹಿಂದೂ ದಮನ ನೀತಿ ಮುಂದುವರಿದರೆ ಕೇವಲ ಪ್ರತಿಭಟನೆ ಅಲ್ಲ, ವಿಧಾನಸೌಧ ಚಲೋ ಮಾಡುತ್ತೇವೆ. ಈ ದಬ್ಬಾಳಿಕೆಯನ್ನು ನಿಲ್ಲಿಸಬೇಕು ಎಂದರು. ಇದನ್ನೂ ಓದಿ: ಸರ್ಕಾರದಿಂದ ಬಾರದ ಕೋಟ್ಯಂತರ ರೂಪಾಯಿ ಅನುದಾನ – ಪತ್ರ ಬರೆದು ಕೆಆರ್‌ಐಡಿಎಲ್ ಎಇಇ ನಾಪತ್ತೆ!

