-ಒಂದು ದಿನದ ಸಂಬಳ ಕಟ್ ಮಾಡುವ ಎಚ್ಚರಿಕೆ
ಬೀದರ್: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೇಟ್ ಬಂದ್ ಮಾಡಿ ಜಿಲ್ಲಾ ಪಂಚಾಯತ್ (Zilla Panchayat) ಸಿಇಒ (CEO) ಕ್ಲಾಸ್ ತೆಗೆದುಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ.
ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಕಚೇರಿಗೆ ದಿಢೀರ್ ಭೇಟಿ ನೀಡಿ, ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ವೇಳೆ ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಬಂದ್ ಮಾಡಿ, ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ | ಹಳೇ ಹೆದ್ದಾರಿ ತಡೆದು ರೈತರ ಪ್ರತಿಭಟನೆ – ಪೊಲೀಸರೊಂದಿಗೆ ವಾಗ್ವಾದ; ಕಟ್ಟೆಯೊಡೆದ ಆಕ್ರೋಶ
ಕಚೇರಿ ಒಳಗಡೆ ಹೋಗಿ ರಿಯಾಲಿಟಿ ಚೆಕ್ ಮಾಡಿದಾಗ ಖಾಲಿ ಖಾಲಿ ಚೇರ್ ನೋಡಿ, ಸಿಇಒ ಶಾಕ್ ಆಗಿದ್ದಾರೆ. ಬಳಿಕ ಗೇಟ್ ಬಳಿ ನಿಂತು ತಡವಾಗಿ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ತವ್ಯ ಆ್ಯಪ್ ಬಳಕೆ ಕಡ್ಡಾಯವಿದ್ದರೂ ಕೂಡ ಯಾಕೆ ಲೇಟ್? ನೀವು ಫೀಲ್ಡ್‌ಗೆ ಹೋಗಿದ್ದಲ್ಲಿ ಕರ್ತವ್ಯ ಆ್ಯಪ್‌ನಲ್ಲಿ ಯಾಕೆ ನಮೂದಿಸಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಸಮಂಜಸ ಉತ್ತರ ಬರದ ಕಾರಣ ಒಂದು ದಿನದ ಸಂಬಳ ಕಟ್ ಮಾಡುವುದಾಗಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಕ್ಲಾಸ್ ತೆಗೆದುಕೊಂಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಅನುಮತಿಯಿಲ್ಲದಿದ್ದರೂ ಡಿಜೆ ಬಳಕೆ ಆರೋಪ – 15 ಮಂದಿ ವಿರುದ್ಧ FIR

