ಚೆನ್ನೈ: ಮನೆಯಲ್ಲಿದ್ದ ಹಣ (Money) ಹಾಗೂ ಚಿನ್ನಾಭರಣ (Gold) ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ತಮಿಳುನಾಡಿನ ಯೂಟ್ಯೂಬರ್ ಒಬ್ಬರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.
ನಾಗರ್ಕೋಯಿಲ್ ಸಮೀಪದ ತಮ್ಮತುಕೋನಂನ ವಿಐಪಿ ಗಾರ್ಡನ್ನಲ್ಲಿ ವಾಸವಾಗಿರುವ ಯೂಟ್ಯೂಬರ್ ವಿನೋತ್ ಕುಮಾರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 944 ಗ್ರಾಂ ಚಿನ್ನ ಮತ್ತು ನಗದನ್ನು ಕಳ್ಳರು ದೋಚಿದ್ದಾರೆ. ಇತ್ತೀಚೆಗೆ, ದಂಪತಿ ತಮ್ಮ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಧುಮಿತಾ ತನ್ನ ಮಗಳ ಮೇಲೆ ಹಣವನ್ನು ಸುರಿಯುವುದು, ಚಿನ್ನಾಭರಣಗಳನ್ನು ಪ್ರದರ್ಶಿಸುವುದು ಸೆರೆಯಾಗಿದೆ. ಇದನ್ನೂ ಓದಿ: ಹಾಸನದಲ್ಲಿ ನವವಿವಾಹಿತೆ ನಿಗೂಢ ನಾಪತ್ತೆ – 8 ದಿನಗಳ ಬಳಿಕ ಮೃತದೇಹ ಪತ್ತೆ!

ಮನೆಯಲ್ಲಿ ಯೂಟ್ಯೂಬರ್ ವಿನೋತ್ ಕುಮಾರ್, ಪತ್ನಿ ಮಧುಮಿತಾ ವಾಸವಾಗಿದ್ದರು. ರಾತ್ರಿಯ ವೇಳೆ ಅಪರಿಚಿತರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜಕ್ಕಮಂಗಲಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳು ಮತ್ತು ದಂಪತಿಯ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಪರಿಶೀಲಿಸುತ್ತಿದ್ದಾರೆ.
ಕನ್ಯಾಕುಮಾರಿಯ ವಿನೋದ್ ಕುಮಾರ್ ಹಾಗೂ ಪತ್ನಿ ಇಬ್ಬರು ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ದಂಪತಿಗೆ ಪುಟ್ಟ ಮಗಳಿದ್ದಾಳೆ. ಇವರ ಹಲವು ವಿಡಿಯೋಗಳಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ. ವಿನೋದ್ ಕುಮಾರ್ ಹಾಗೂ ಪತ್ನಿ ಇಬ್ಬರು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮಾಡುತ್ತಾ ಆದಾಯಗಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸರ್ಕಾರದ ನಿಯಮದಂತೆ ಸೈಟ್ ಕ್ಲೀನಿಂಗ್ ವೇಳೆ ಬಯಲಾಯ್ತು ಪತ್ನಿಯ ಭೀಕರ ಕೊಲೆ ರಹಸ್ಯ

