ಹಾಸನ: ಜಿಲ್ಲೆಯಲ್ಲಿ ನವವಿವಾಹಿತೆ (Newlywed Woman) ಪ್ರಿಯಾಂಕಾ ನಿಗೂಢ ನಾಪತ್ತೆ ಘಟನೆ ನಡೆದು ಎಂಟು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ಇಂದು ಮೃತದೇಹ ಸಿಕ್ಕಿದೆ. 8 ದಿನಗಳಿಂದ ಪ್ರಿಯಾಂಕಾ ಮೃತದೇಹಕ್ಕಾಗಿ ಪೊಲೀಸರು (Police) ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು.

ಸೆ.19ರ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ, ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ಪತಿ ರಾಜಶೇಖರ್ ಎದುರೇ ಪ್ರಿಯಾಂಕಾ ನಾಲೆಗೆ ಜಿಗಿದಿದ್ದರು. ಪತಿ ರಾಜಶೇಖರ್ ನಾಲೆಗೆ ತಳ್ಳಿದ್ದಾನೆಂದು ಪ್ರಿಯಾಂಕಾ ಪೋಷಕರು ಆರೋಪಿಸಿದ್ದರು.
ಆಕೆಗೆ ಈಜು ಬರುತ್ತದೆ, ಅವಳಿಗೆ ಮೊದಲೆ ಮದುವೆಯಾಗಿತ್ತು ಎಂದು ರಾಜಶೇಖರ್ ಪೋಷಕರು ಪ್ರತ್ಯಾರೋಪ ಮಾಡಿದ್ದರು. ಹೇಮಾವತಿ ನಾಲೆಯಲ್ಲಿ ನೀರು ನಿಲ್ಲಿಸಿದ ಹಿನ್ನೆಲೆ ಇಂದು ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ಪ್ರಿಯಾಂಕಾ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

