ಬಿಗ್‌ಬಾಸ್ (Bigg Boss) ಮನೆಯ ಆಟದಲ್ಲಿ ಯಾವಾಗ ಯಾವ ತಿರುವು ಸಿಗುತ್ತೆ ಅಂತ ಊಹಿಸೋಕೂ ಸಾಧ್ಯವಿಲ್ಲ. ಅದರಂತೆ ಎಮರ್ಜೆನ್ಸಿ ಎಕ್ಸಿಟ್ (Emergency Exit) ಮೂಲಕ ತಾಂಡವ್ ರಾಮ್ ಮನೆಯಿಂದ ಹೊರಬಂದಿದ್ದಾರೆ.
ವಾರದ ಆರಂಭದಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ಬಿಗ್ ಟ್ವಿಸ್ಟ್ ನೀಡಿದ್ದರು. ‘ಎಮರ್ಜೆನ್ಸಿ ಎಕ್ಸಿಟ್’ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಟಾಸ್ಕ್ ಆಡಿದ್ದ ನಾಲ್ವರು ಅಡ್ವಾಂಟೇಜ್ ಪಡೆದುಕೊಂಡಿದ್ದರು. ಕೊನೆಗೆ ಟಾಸ್ಕ್‌ನಲ್ಲಿ ತಮ್ಮ ವೋಟ್ ಹೆಚ್ಚಿಸಿಕೊಳ್ಳಲು ಬೇರೆಯವರಿಂದ ವೋಟ್ ಪಡೆದುಕೊಂಡಿದ್ದೇ ತಡ.. ಮತಗಳ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿ ತಾಂಡವ್ ರಾಮ್ ಅನಿರೀಕ್ಷಿತವಾಗಿ ಎಲಿಮಿನೇಟ್ ಆಗಿದ್ದಾರೆ. ಇದನ್ನೂ ಓದಿ: ಶಾಕ್ ಕೊಟ್ಟ ಎಮರ್ಜೆನ್ಸಿ ಎಕ್ಸಿಟ್… ದೊಡ್ಮನೆ ಸ್ಪರ್ಧಿಗಳು ಹೈರಾಣು!
ಅನಿರೀಕ್ಷಿತ ನಿರ್ಗಮನ, ಮನೆ ಮೌನ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/E6FgzNRhgZ
— Colors Kannada (@ColorsKannada) September 25, 2026
ಧನುಷ್ ತಾಂಡವ್ ಅವರ 50% ವೋಟ್ ಪಡೆದುಕೊಂಡಿದ್ದೇ ತಾಂಡವ್ ಪಾಲಿಗೆ ಮುಳುವಾಗಿಹೋಯ್ತು. ತನ್ನದೊಂದು ನಿರ್ಧಾರದಿಂದ ತಾಂಡವ್ ಮನೆಯಿಂದ ಹೊರಹೋಗುತ್ತಿರುವುದನ್ನು ಕಂಡ ಧನುಷ್, ಇದು ನನ್ನ ಲೈಫ್‌ನಲ್ಲೇ ಮರೆಯೋಕೆ ಆಗ್ದೆ ಇರೋ ರಿಗ್ರೆಟ್ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ತಾಂಡವ್, ಧನುಷ್ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿ, ಜನರ ಮನಗೆದಿದ್ದಾರೆ.
ತಾಂಡವ್ ಲಗೇಜ್ ಪ್ಯಾಕ್ ಮಾಡಿಕೊಂಡು ಎಮರ್ಜೆನ್ಸಿ ಎಕ್ಸಿಟ್‌ಗೆ ರೆಡಿಯಾಗುತ್ತಿದ್ದಂತೆ ಇಡೀ ಮನೆ ಕಣ್ಣೀರಿಟ್ಟಿದೆ. ನಾನು ಇಷ್ಟು ಬೇಗ ಹೊರಗಡೆ ಹೋಗ್ತೀನಿ ಅಂತ ಅಂದುಕೊಂಡಿರಲಿಲ್ಲ. ಎಲ್ಲರೂ ಚೆನ್ನಾಗಿ ಆಡಿ, ಗೆದ್ದು ಬನ್ನಿ, ಹೊರಗಡೆ ಕಾಯ್ತಿರ್ತಿನಿ ಎಂದು ನಗುಮುಖದಿಂದಲೇ ಎಲ್ಲರಿಗೂ ವಿದಾಯ ಹೇಳಿ ಎಮರ್ಜೆನ್ಸಿ ಡೋರ್ ಮೂಲಕ ತಾಂಡವ್ ಹೊರನಡೆದಿದ್ದಾರೆ.ಇದನ್ನೂ ಓದಿ: ʻಹೂʼ ಕೇಳಿದ ಶಾಸ್ತ್ರಿಗೆ ʻWho’ ಅಂದ್ಲು ದೊಡ್ಮನೆ ದೇವಿ

