ಬೆಂಗಳೂರು: ಪ್ರದೋಷ್ ಮಾಫಿ ಸಾಕ್ಷಿ ತಡೆಯಲು ಕೊಲೆ ಆರೋಪಿ ದರ್ಶನ್ (Darshan) ಕಸರತ್ತು ನಡೆಸುತ್ತಿದ್ದಾರೆ. ಒಂದಾದ ಮೇಲೊಂದರಂತೆ ಪ್ರಯತ್ನ ಪಡುತ್ತಿದ್ದು, ಇದೀಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ವಾರ ಮುಂದೂಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಗೆ ಸೆಷನ್ಸ್ ಕೋರ್ಟ್ ಸೋಮವಾರಕ್ಕೆ (ಸೆ.28) ದಿನಾಂಕ ಪ್ರಕಟ ಮಾಡಿದೆ. ಇದೀಗ ದರ್ಶನ್ ಪರ ವಕೀಲರು, ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ್ದೇವೆ. ಹೀಗಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ದಿನಾಂಕವನ್ನು ಒಂದು ವಾರ ಮುಂದೂಡಿಕೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಕ್ಕಿಲ್ಲ ಅಂತ ರೈಲು ಅಪಘಾತದ ಪರಿಹಾರ ನಿರಾಕರಿಸುವಂತಿಲ್ಲ; ಸುಪ್ರೀಂ ಕೋರ್ಟ್
ಇದಕ್ಕೂ ಮುನ್ನ ಮಾಫಿ ಸಾಕ್ಷಿ ಹೇಳಿಕೆ ವಿಚಾರವಾಗಿ ಸೆಷನ್ಸ್ ಕೋರ್ಟ್ನ ಆದೇಶ ಪ್ರಶ್ನೆ ಮಾಡಿ, ಹೈಕೋರ್ಟ್ಗೆ (High Court) ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಮಾಫಿ ಸಾಕ್ಷಿ ಹೇಳಿಕೆ ಪ್ರಶ್ನೆ ಮಾಡುವಂತಿಲ್ಲ, ಬದಲಾಗಿ ಆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದ್ರೆ ಮಾತ್ರ ಪ್ರಶ್ನೆ ಮಾಡಬಹುದು ಅಂತಾ ಅಭಿಪ್ರಾಯ ಪಟ್ಟು, ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆ ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕೋರಿದ್ದಾರೆ.

