ಚಿಕ್ಕಮಗಳೂರು: ಎರಡು ತೆಂಗಿನ ಗಿಡಗಳನ್ನು ಕಡಿದಿದ್ದಕ್ಕೆ ಅಳಿಯನನ್ನು ಮಾವ ಅದೇ ಮಚ್ಚಿನಲ್ಲಿ ಕೊಚ್ಚಿ ಕೊಲೆಗೈದ (Murder) ಘಟನೆ ಕಡೂರು (Kadur) ತಾಲೂಕಿನ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ.
ದೇವರಾಜ್ ನಾಯ್ಕ್ (35) ಕೊಲೆಯಾದ ದುರ್ದೈವಿ. ಮಾವ ರಾಜಾನಾಯ್ಕ್ ಕೊಲೆಗೈದ ಆರೋಪಿ. ಇಬ್ಬರ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಹೀಗೆ ಜಗಳವಾಡಿ, ಮಾವನ ಹೊಲದಲ್ಲಿದ್ದ ಎರಡು ತೆಂಗಿನ ಗಿಡಗಳನ್ನು ದೇವರಾಜ್ ಕತ್ತರಿಸಿ ಹಾಕಿದ್ದ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ರಾಜಾನಾಯ್ಕ್, ಮಚ್ಚಿನಿಂದ ಕೊಚ್ಚಿ ದೇವರಾಜ್‌ನನ್ನು ಕೊಲೆಗೈದಿದ್ದಾನೆ. ಈ ಸಂಬಂಧ ಪಂಚನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುವಕನ ಬ್ಲ್ಯಾಕ್ ಮೇಲ್‌ಗೆ ಹೆದರಿ ಗೃಹಿಣಿ ಆತ್ಮಹತ್ಯೆ
ರಾಜಾನಾಯ್ಕ್‌ನ ಮಗಳನ್ನೇ ದೇವರಾಜ್ ಮದುವೆಯಾಗಿದ್ದ. ಅದರೆ ಜಗಳವಾಡಿ ಪತ್ನಿ, ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್‌ನಿಂದ ಹಲ್ಲೆ – ಡಾಬಾ ಮಾಲೀಕ ಸಾವು

