ರಾಂಚಿ: ಜಮ್ಶೆಡ್ಪುರ ನಗರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಜಾರ್ಖಂಡ್ (Jharkhand) ಸಚಿವರೊಬ್ಬರ ಪುತ್ರಿ ಸೇರಿದಂತೆ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ.
ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತವು ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮರೀನ್ ಡ್ರೈವ್ ರಸ್ತೆಯಲ್ಲಿ ಸಂಭವಿಸಿದೆ. ಇದನ್ನೂ ಓದಿ: ಬಿ.ಟೆಕ್ ಅರ್ಧಕ್ಕೆ ನಿಲ್ಲಿಸಿ ಕಳ್ಳತನ ವೃತ್ತಿ, ಬಾಂಗ್ಲಾದಲ್ಲಿ ಪೌರತ್ವ, – ಬೆಂಗಳೂರಿಗೆ ಕಾಲಿಟ್ಟು ಪೊಲೀಸ್ ಅತಿಥಿಯಾದ ಹೈಫೈ ಖದೀಮ!
ಮೃತರನ್ನು ಸಾರ್ಥಕ್ ಅಗರ್ವಾಲ್, ನಮನ್ ಗುಪ್ತಾ ಮತ್ತು ವಂಶಿಕಾ ಖಂಡೇಲ್ವಾಲ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಉಪಾಧೀಕ್ಷಕ ಮನೋಜ್ ಠಾಕೂರ್ ತಿಳಿಸಿದ್ದಾರೆ.
ನಾಲ್ಕು ಪಥದ ಹೆದ್ದಾರಿಯ ಬಲಬದಿಯಲ್ಲಿ ರಸ್ತೆ ವಿಭಜಕದ ಸಮೀಪ ಟ್ರಕ್ ನಿಂತಿತ್ತು. ಅದರ ಹಿಂಭಾಗದಲ್ಲಿ ಮರದ ಸಣ್ಣ ಕೊಂಬೆಯೊಂದನ್ನು ಇರಿಸಲಾಗಿತ್ತು. ಆದರೆ, ರಸ್ತೆಯಲ್ಲಿ ಯಾವುದೇ ಪ್ರತಿಫಲಕ ಕಂಡುಬರಲಿಲ್ಲ. ಟ್ರಕ್ನ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: ಆನೇಕಲ್ ರಸ್ತೆ ಬದಿಯ ಪೊದೆಯಲ್ಲಿ ಶವ ಪತ್ತೆ – ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ
ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ನಾಲ್ವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

