ಬೆಂಗಳೂರು: ಆನೇಕಲ್ ರಸ್ತೆ ಬದಿಯ ಪೊದೆಯಲ್ಲಿ ಪತ್ತೆಯಾಗಿದ್ದ (Anekal) ಶವ ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಕೊಲೆಯಾದ ಯುವಕನ ಗುರುತು ಪತ್ತೆಹಚ್ಚಿದ್ದಾರೆ.
ಆನೇಕಲ್ ತಾಲೂಕಿನ ರಾಮಕೃಷ್ಣಪುರ ರಸ್ತೆ ಬದಿ ಯುವಕನ ಶವ ಪತ್ತೆಯಾಗಿತ್ತು. ಈ ಶವ ಸುಭಾಷ್ ಎಂಬ ಯುವಕನದ್ದು ಎನ್ನಲಾಗಿದೆ.
ಸುಭಾಷ್ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದ ನಿವಾಸಿಯಾಗಿದ್ದ. ಡಕಾಯಿತಿ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ, ಗ್ಯಾಂಗ್ ಕಟ್ಟಿಕೊಂಡು ಆಟೋದಲ್ಲಿ ಓಡಾಡುತ್ತಿದ್ದ.
ಸುಭಾಷ್ ಹಾಗೂ ಅವನ ಗ್ಯಾಂಗ್ 23ರಂದು ರಾತ್ರಿ ಆಟೋದಲ್ಲಿ ಬಂದು, ರಾಮಕೃಷ್ಣಪುರ ರಸ್ತೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ನಂತರ ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಹೊಡೆದು ಆತನನ್ನು ಕೊಲೆ ಮಾಡಲಾಗಿದೆ. ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ – ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಶಾಂತಾ ಹೊಸಮನಿ
ಆರೋಪಿಗಳು ಕೊಲೆ ಮಾಡಿ ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಬಂಧನಕ್ಕೆ ಸೂರ್ಯನಗರ ಪೊಲೀಸರು ಬಲೆ ಬೀಸಿದ್ದಾರೆ.ಇದನ್ನೂ ಓದಿ: ಮಂಡ್ಯದಲ್ಲಿ ಆಟೋ ಸ್ಟ್ಯಾಂಡ್ ಪಾಲಿಟಿಕ್ಸ್ – ಹೆಚ್‌ಡಿಕೆ-`ಕೈ’ ಶಾಸಕರ ನಡುವೆ ವಾರ್!

