ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ವಂದಲಿ ಗ್ರಾಮದಲ್ಲಿ ದೇವಸ್ಥಾನದ ನಿರ್ಮಾಣ ಹಂತದ ಮಹಾದ್ವಾರದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಬಿರುಕು ಬಿಟ್ಟಿದೆ.
ಗ್ರಾಮದ ಐತಿಹಾಸಿಕ ಬಲಭೀಮ ಆಂಜನೇಯ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮ ನಿರ್ಮಾಣ ಹಂತದ ಗೋಪುರದ ಹಲವು ಭಾಗಗಳಿಗೆ ಹಾನಿಯಾಗಿದೆ. ಗ್ರಾಮಸ್ಥರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಗೋಪುರ ಅಂತಿಮ ಹಂತದಲ್ಲಿತ್ತು. ಇದನ್ನೂ ಓದಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ – ಜೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
ಘಟನೆಯಿಂದ ಮಹಾಗೋಪುರದ ಮೇಲೆ ಹಾರಿಸಲಾಗಿದ್ದ ಭಗವಾಧ್ವಜಗಳು ಸುಟ್ಟು ಕರಕಲಾಗಿವೆ. ಅಲಂಕಾರಿಕ ಗೊಂಬೆಗಳ ದೇಹದ ಭಾಗಗಳು ಮುರಿದುಬಿದ್ದು, ಗೋಪುರದಲ್ಲಿ ಭಾರಿ ಬಿರುಕುಗಳು ಉಂಟಾಗಿವೆ. ಮಹಾಗೋಪುರಕ್ಕೆ ಸಿಡಿಲು ಬಡಿದ ಹಿನ್ನೆಲೆ ಭಕ್ತರಲ್ಲಿ ಆತಂಕ ಮೂಡಿದೆ.

