-ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ನೇತೃತ್ವದಲ್ಲಿ ಹೋರಾಟ
ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬಿಜೆಪಿ (BJP) ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ನೂರಾರು ರೈತರು, ಬಿಜೆಪಿ ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.
ರಾಯಚೂರು (Raichuru) ನಗರದ ಜೆಸ್ಕಾಂ (GESCOM) ಕಚೇರಿ ಮುಂದೆ ರಸ್ತೆ ಅಡ್ಡಲಾಗಿ ನಿಂತು, ವಿದ್ಯುತ್ ಹಾಗೂ ನೀರಿಗಾಗಿ ಆಗ್ರಹಿಸಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದರು. ಎತ್ತಿನ ಬಂಡಿ, ಟ್ರ್ಯಾಕ್ಟರ್ಗಳ ಮೂಲಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಿದ ತಿಪ್ಪರಾಜು ನಡುರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ರೈತರ ಕಷ್ಟಗಳ ಕಡೆ ಗಮನ ಹರಿಸುವಂತೆ ಒತ್ತಾಯಿಸಿದರು. ಇದನ್ನೂ ಓದಿ: ರಾಮ ಮಂದಿರದಲ್ಲಿ 105 ಬಾರಿ ಕಾಣಿಕೆ ಕಳವು, ಸೆ.25ರ ಒಳಗಡೆ ಚಾರ್ಜ್ಶೀಟ್ ಸಲ್ಲಿಕೆ: ಸುಪ್ರೀಂಗೆ ಎಸ್ಐಟಿ
ಇಡೀ ರಾಜ್ಯಕ್ಕೆ ಶೇ.50ರಷ್ಟು ವಿದ್ಯುತ್ ಕೊಡುವ ರಾಯಚೂರಿನ ಗ್ರಾಮೀಣ ಭಾಗಕ್ಕೆ ವಿದ್ಯುತ್ ಕೊರತೆಯಿದೆ. ಕೇವಲ ಮೂರು ಗಂಟೆ ವಿದ್ಯುತ್ ನೀಡಿ, ಜೆಸ್ಕಾಂನಿಂದ ಕಣ್ಣಾಮುಚ್ಚಾಲೆ ನಡೆದಿದೆ ಅಂತ ಆರೋಪಿಸಿದರು. ಗ್ರಾಮೀಣ ಭಾಗದ ಮನೆಗಳಿಗೆ 24 ಗಂಟೆ ಹಾಗೂ ರೈತರ ಪಂಪ್ಸೆಟ್ಗೆ 12 ಗಂಟೆ ವಿದ್ಯುತ್ ನೀಡುವಂತೆ ಆಗ್ರಹಿಸಿದರು.
ಈಗಾಗಲೇ ಬರ ಘೋಷಣೆಯಾಗಿದೆ, ಆದ್ರೆ ರೈತರ ಸಂಕಷ್ಟಕ್ಕೆ ಪರಿಹಾರ ಸಿಗಬೇಕು. ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡುವಂತೆ ಒತ್ತಾಯಿಸಿದರು. ಟಿಎಲ್ಬಿಸಿ ಕಾಲುವೆ ಮೇಲ್ಬಾಗ ಕೆಳಭಾಗ ಎರಡೂ ಕಡೆಯೂ ನೀರಿನ ಸಮಸ್ಯೆ ಉಂಟಾಗಿದೆ, ಸಮರ್ಪಕವಾಗಿ ಗೇಜ್ ನಿರ್ವಹಣೆ ಮೂಲಕ ಕಾಲುವೆಯ 104 ಮೈಲ್ಗೆ ನೀರು ಹರಿಸಲು ಒತ್ತಾಯಿಸಿದರು. ಜೆಸ್ಕಾಂ ಕಚೇರಿ ಮುಂದೆ ರಸ್ತೆ ತಡೆ ಹಿನ್ನೆಲೆ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಖ್ಯ ರಸ್ತೆ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡಬೇಕಾಯಿತು.ಇದನ್ನೂ ಓದಿ: `ವಂದೇ ಮಾತರಂ’ಗೆ ಕತ್ತರಿ; ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ: ಪ್ರಹ್ಲಾದ್ ಜೋಶಿ

