– ಪತಿ ತಂಗಿಯ ಮಗು, ಸ್ವಂತ ಮಗುವನ್ನು ಬಾವಿಗೆ ಎಸೆದ ಮಹಿಳೆ
ಮಂಗಳೂರು: ಕೌಟುಂಬಿಕ ಕಲಹಕ್ಕೆ (Family Dispute) 3 ವರ್ಷದ ಮಗು ಬಲಿಯಾಗಿರುವ ಘಟನೆ ಉಪ್ಪಿನಂಗಡಿ (Uppinangady) ಪೋಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ (Perne) ಎಂಬಲ್ಲಿ ನಡೆದಿದೆ.
ನೂರುನ್ನೀಸಾ (28) ಮತ್ತು ಆಕೆಯ ಪತಿ ಸಿನಾನ್ (32) ಮಧ್ಯೆ ಇಂದು ಫೋನ್‌ನಲ್ಲಿ ಕಲಹ ನಡೆದಿತ್ತು. ಇದರಿಂದ ಕೋಪಗೊಂಡ ನೂರುನ್ನೀಸಾ ಪತಿಯ ತಂಗಿಯ ಮಗು ಮತ್ತು ಆಕೆಯ ಸ್ವಂತ ಮಗುವನ್ನು ಬಾವಿಗೆ ಎಸೆದಿದ್ದಳು. ಸ್ಥಳೀಯರು ಬಂದು ಎರಡೂ ಮಕ್ಕಳನ್ನು ಬಾವಿಯಿಂದ ಮೇಲೆಕ್ಕೆತ್ತಿದ್ದರು. ಆದರೆ ಪತಿ ತಂಗಿಯ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ಪಂಜಾಬ್ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ – ಎನ್‌ಕೌಂಟರ್‌ನಲ್ಲಿ ಆರೋಪಿ ಸಾವು
ನೂರುನ್ನೀಸಾಳ ಮೂರೂವರೆ ವರ್ಷದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೋಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಸಿಎಂಗೆ NSUI ಉಪಾಧ್ಯಕ್ಷ ಕೀರ್ತನ್ ಗೌಡ ಮನವಿ

