ನವದೆಹಲಿ: ಪತ್ನಿಗೆ ಐಫೋನ್ 18 ಪ್ರೊ ಫೋನ್ ಕೊಡಿಸಲು (i phone) ಪತಿಯೊಬ್ಬರು ಚಿನ್ನವನ್ನೇ ಮಾರಿ ಗಂಟೆಗಟ್ಟಲೆ ಶಾಪ್ ಮುಂದೆ ಕಾದಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಐಫೋನ್ 18 ಪ್ರೊ ಲಾಂಚ್ ಆದಾಗಿನಿಂದ ದುಬಾರಿಯಾಗಿದ್ದರೂ ಫೋನ್‌ಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಆ್ಯಪಲ್ ಸ್ಟೋರ್‌ಗಳು ತೆರೆಯುವ ಮೊದಲೇ ಗ್ರಾಹಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹೊಸ ಫೋನ್ ಖರೀದಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ದೆಹಲಿಯ ನೋಯ್ಡಾದ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆ್ಯಪಲ್ ಸ್ಟೋರ್‌ನಲ್ಲಿ ಹೊಸ ಫೋನ್ ಖರೀದಿಸಲು ಜನರು ಬೆಳಗ್ಗೆಯೇ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 8 ಗಂಟೆ ವೇಳೆಗೆ ಅಂಗಡಿ ಮುಂದೆ ದೊಡ್ಡ ಕ್ಯೂ ನಿರ್ಮಾಣವಾಗಿತ್ತು.
ಈ ವೇಳೆ ಕ್ಯೂನಲ್ಲಿ ಕಾಯುತ್ತಿದ್ದ ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಉಡುಗೊರೆಯಾಗಿ ಐಫೋನ್ 18 ಪ್ರೊ ಖರೀದಿಸಲು ಬಂದಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನನ್ನ ಪತ್ನಿಗೆ ಬರ್ಗಂಡಿ ಬಣ್ಣದ ಐಫೋನ್ ಬೇಕು. ಆಕೆ ಇದುವರೆಗೂ ಐಫೋನ್ ಬಳಸಿಲ್ಲ. ಆದರೆ ನನ್ನ ಬಳಿ ಫೋನ್ ಖರೀದಿಸುವಷ್ಟು ಹಣ ಇರಲಿಲ್ಲ. ಹಾಗಾಗಿ ಚಿನ್ನ ಮಾರಿ ಆಕೆಗೆ ಐಫೋನ್ ಕೊಡಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ
“ಆಕೆ ಎಂದಿಗೂ ಐಫೋನ್ ಬಳಸಿಲ್ಲ. ಹೀಗಿರುವಾಗ ಆಕೆಗೆ ಇಷ್ಟವಾದ ವರ್ಷನ್‌ನ ಫೋನ್ ಕೊಡಿಸಬೇಕು ಎಂದುಕೊಂಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚುತ್ತಿದೆ ಕೆಂಗಣ್ಣು ಸೋಂಕು – ಶಾಲಾ ಮಕ್ಕಳು, ವೃದ್ಧರು ಹೈರಾಣು; ವೈದ್ಯರ ಸಲಹೆ ಏನು?

