– ಪ್ರತಿ ತಿಂಗಳು 75,000 ರೂ. ವೇತನ ಪಡೆಯುತ್ತಿರೋ ಶಾಸಕ ಮೇಟಿ ಸೊಸೆ
ಬಾಗಲಕೋಟೆ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಅಕ್ರಮ ಎಸಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹಾಲಿ ಡಿಹೆಚ್‌ಒ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಹಾಲಿ ಶಾಸಕ ಉಮೇಶ್ ಮೇಟಿ ಅವರ ಸೊಸೆಯಾಗಿರುವ ಡಾ. ಅಂಕಿತಾ ಯರಗಲ್ ಅವರು ಪೂರ್ಣಾವಧಿ ಸ್ನಾತಕೋತ್ತರ (MD) ವ್ಯಾಸಂಗ ಮಾಡುತ್ತಿದ್ದರೂ, ಪ್ರತಿ ತಿಂಗಳು ಸರ್ಕಾರದಿಂದ 75,000 ರೂ. ವೇತನ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪಿಡಬ್ಲ್ಯೂಡಿ ಇಲಾಖೆಯಲ್ಲಿ ಲಂಚ ಪಡೆದು ವಿದೇಶಿ ಹೂಡಿಕೆಗೆ ದಾಖಲೆ ಏನಿದೆ? – ಪ್ರಿಯಾಂಕ್ ಖರ್ಗೆ
ಡಾ. ಅಂಕಿತಾ ಯರಗಲ್ ಅವರು 2025ರ ಸೆಪ್ಟೆಂಬರ್‌ನಿಂದ ಬಾಗಲಕೋಟೆಯ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ಗೆ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು. ತದನಂತರ, 2026ರ ಮಾರ್ಚ್‌ನಲ್ಲಿ ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. (ಪ್ಯಾಥಾಲಜಿ) ಕೋರ್ಸ್‌ಗೆ ಪ್ರವೇಶ ಪಡೆದು ಏಪ್ರಿಲ್‌ನಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ನಿಯಮಗಳ ಪ್ರಕಾರ ಬೆಳಿಗ್ಗೆ 9 ರಿಂದ ಸಂಜೆ 4:30 ರವರೆಗೆ ನಮ್ಮ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು, ಕಾಲೇಜಿನಲ್ಲಿ ಪೂರ್ಣಾವಧಿ ಶಿಕ್ಷಣ ಪಡೆಯುತ್ತಿರುವುದರಿಂದ ಕ್ಲಿನಿಕ್‌ಗೆ ಸರಿಯಾಗಿ ಹಾಜರಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸೇವೆ ಸಿಗದೆ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್ ಬಹುತೇಕ ಬಂದ್ ಸ್ಥಿತಿಯಲ್ಲಿದೆ.
ಸರ್ಕಾರಿ ನಿಯಮಾವಳಿ ಪ್ರಕಾರ ಎಂ.ಡಿ. ವ್ಯಾಸಂಗ ಮಾಡುತ್ತಾ ಸರ್ಕಾರಿ ಸೇವೆಯ ವೇತನ ಪಡೆಯುವುದು ಕಾನೂನುಬಾಹಿರವಾಗಿದೆ. ಈ ಬಗ್ಗೆ ಡಾ. ರಾಜಕುಮಾರ ಯರಗಲ್ ಮಾತ್ರ ನುಣುಚಿಕೊಳ್ಳೋ ಕೆಲಸ ಮಾಡುತ್ತಿದ್ದಾರೆ. ಇತ್ತ ಇಷ್ಟೆಲ್ಲ ಅಕ್ರಮ ಬಯಲಾದ್ರೂ ಡಿಹೆಚ್‌ಓ ಯರಗಲ್ ಮೇಲಾಗಲಿ ಅಥವಾ ಅವರ ಮಗಳ ಮೇಲೆ ಕ್ರಮ ಜರುಗಿಸಿಲ್ಲ. ಇದನ್ನೂ ಓದಿ: ಇಡಿ ಕೇಂದ್ರದ ಕೈಗೊಂಬೆ, ಇನ್ನಷ್ಟು ಕಾಂಗ್ರೆಸ್ ಶಾಸಕರ ಮೇಲೆ ದಾಳಿ ಆಗಲಿದೆ: ನಾಗೇಂದ್ರ ಭವಿಷ್ಯ

