* 2 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸೈಬರ್ ಕ್ರೈಂ ಪೊಲೀಸರು
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೃಪಾ ಆಳ್ವಾ (Kripa Alva) ವಿಚಾರಣೆಗೆ ಹಾಜರಾದರು. ಸೈಬರ್ ಕ್ರೈಂ ಪೊಲೀಸರು ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ಇಂದು ವಿಚಾರಣೆಗೆ ಹಾಜರಾಗಲು ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್ ನೀಡಿತ್ತು. ಮೊಬೈಲ್, ಲ್ಯಾಪ್ಟಾಪ್ ಸಮೇತ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್, ಕಾಂಗ್ರೆಸ್ಗೆ ಸೋಲುವ ಸಿಚುವೇಶನ್: ಆರ್ ಅಶೋಕ್
ಪ್ರಕರಣ ಸಂಬಂಧ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಕೃಪಾ ಆಳ್ವಾ ವಿಚಾರಣೆಗೆ ಹಾಜರಾದರು. 2 ಗಂಟೆ ವಿಚಾರಣೆ ಬಳಿಕ ಮತ್ತೆ ನವೆಂಬರ್ 11 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.
ಕೃಪಾ ಆಳ್ವಾ ಪರ ವಕೀಲೆ ನಿಖಿತಾ ಮಾತನಾಡಿ, ಕೃಪಾ ಆಳ್ವಾ ಈಗಾಗಲೇ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಮ್ಮೆ ಬರೋದಕ್ಕೆ ಹೇಳಿದ್ರು, ಹಾಗಾಗಿ ಬಂದಿದ್ದಾರೆ. ಈಗಾಗಲೇ ಡಿಸಿಪಿ ಎದುರು ಎರಡು ಸಾರಿ ಹೇಳಿಕೆ ಕೊಟ್ಟಿದ್ರು. ಅಧಿಕೃತವಾಗಿ ಇಂದು ಹೇಳಿಕೆ ನೀಡಲು ನೋಟಿಸ್ ಕೊಟ್ಟಿದ್ರು. ಹೀಗಾಗಿ, ಸಿಸಿಬಿ ಸೈಬರ್ ತನಿಖಾಧಿಕಾರಿ ಮುಂದೆ ಹೇಳಿಕೆ ಕೊಡಲು ಬಂದಿದ್ದಾರೆ. ಮಗಳ ಜತೆ ವಿದೇಶಕ್ಕೆ ಹೋಗಿದ್ದರು ಅಷ್ಟೆ. ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಕೇಸ್ ಆದ ಮೇಲೆ ಅವರು ವಿದೇಶಕ್ಕೇನು ಹೋಗಿರಲಿಲ್ಲ. ಕೇವಲ ವಿಚಾರಣೆಗೆ ಕರೆದಿದ್ದಾರೆ. ಅದಕ್ಕೆ ಬಂದಿದ್ದಾರೆ. ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕ ಕೃಪಾ ಆಳ್ವಾ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣವಾಗಿ ಮಾತಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ – ದಿಲ್ಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ
