ಬೆಂಗಳೂರು: ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಕಾಂಗ್ರೆಸ್ ನಾಯಕರೇ ಎಂಬುದು ಸಾಬೀತಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸ್ಟಿಂಗ್ ಆಪರೇಷನ್ ವಿವಾದದ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೂ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಮತದಾರರು ಕೂಡ ಕಾಂಗ್ರೆಸ್ ವಿರುದ್ಧ ನಿಂತಿದ್ದಾರೆ. ಇದರ ಪರಿಣಾಮ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಣಿಸಿಕೊಳ್ಳಲಿದೆ ಎಂದು ಅಶೋಕ್ ಹೇಳಿದ್ದಾರೆ.
ಸಿಎಂ ಡಿ. ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಅಶೋಕ್, ಆಂತರಿಕ ಕಚ್ಚಾಟ, ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಪಿಂಚಣಿ ಸಮಸ್ಯೆ ಹಾಗೂ ಇಲಾಖೆಗಳ ಅನುದಾನದ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ.
ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್, ಕಾಂಗ್ರೆಸ್ಗೆ ಸೋಲುವ ಸಿಚುವೇಶನ್!
ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್ ಮಾಡಿಸಿದ್ದು ಮಾನಗೆಟ್ಟ ಕಾಂಗ್ರೆಸ್ ನಾಯಕರೇ ಎಂಬುದು ಸಾಬೀತಾಗಿದೆ. ಇದರ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಿರಿಯ ನಾಯಕ ಕೆ.ಎನ್.ರಾಜಣ್ಣ ಅವರೇ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಬೆಂಬಲಿಗರು, ಮತದಾರರು ಕೂಡ ಕಾಂಗ್ರೆಸ್ಗೆ ವಿರುದ್ಧವಾಗಿ ನಿಂತಿದ್ದಾರೆ. 2028 ರ ವಿಧಾನಸಭಾ ಚುನಾವಣೆಯಲ್ಲೂ ಇದು ಪ್ರತಿಫಲಿಸಲಿದೆ.
ಮುಖ್ಯಮಂತ್ರಿ @DKShivakumar ಅವರೇ, ನಿಮ್ಮ ಆಂತರಿಕ ಕಚ್ಚಾಟ, ರೈತರಿಗೆ ನಿರಂತರವಾಗಿ ಮಾಡಿದ ವಂಚನೆ, ಅಶಕ್ತರ-ಹಿರಿಯ ನಾಗರಿಕರ-ವಿಕಲಚೇತನರ ಪಿಂಚಣಿ ಕಿತ್ತುಕೊಂಡಿದ್ದು, ಅನುದಾನವೇ ಇಲ್ಲದೆ ಬರಿದಾದ ಇಲಾಖೆಗಳು, ಖಜಾನೆ ಸಂಪೂರ್ಣ ಖಾಲಿಯಾಗಿ ನೊಣ ಹೊಡೆಯುವ ಸ್ಥಿತಿ ಬಂದಿರುವುದು, ಹಾಲು-ಬಸ್ ದರ ಏರಿಕೆ- ಇವೆಲ್ಲದರಿಂದಾಗಿ ನಿಮ್ಮ ಆಡಳಿತ ಈ ರಾಜ್ಯಕ್ಕೆ ಮಾರಕ ಎಂದು ಜನರಿಗೆ ಗೊತ್ತಾಗಿದೆ. ಇಂತಹ ದರಿದ್ರ ಆಡಳಿತದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆಲೆಯನ್ನು ಸದ್ಯದಲ್ಲೇ ಕಾಂಗ್ರೆಸ್ ತೆರಬೇಕಾಗುತ್ತದೆ. ಈಗ ಸ್ಟಿಂಗ್ ಆಪರೇಶನ್ನ ವಿವಾದ ನಡೆಯುತ್ತಿದೆ, ಚುನಾವಣೆಯ ಸಮಯದಲ್ಲಿ ನಿಮ್ಮ ಸರ್ಕಾರವನ್ನು ಕಿತ್ತು ಮೂಲೆಗೆ ಬಿಸಾಡುವ ಆಪರೇಶನ್ನ್ನು ಜನರೇ ಮಾಡಲಿದ್ದಾರೆ.
@INCKarnataka
— R. Ashoka (@RAshokaBJP) November 4, 2026
ಹಾಲು ಮತ್ತು ಬಸ್ ದರ ಏರಿಕೆ, ಖಜಾನೆಯ ಸ್ಥಿತಿ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ, ಸರ್ಕಾರದ ಆಡಳಿತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: 22 ವರ್ಷ ಹಳೆಯ NASA ಉಪಗ್ರಹ ಇಂದು ಭೂಮಿಗೆ ವಾಪಸ್- ಬೆಂಗಳೂರಿನ ಮೇಲೂ ಬೀಳಲಿದೆಯೇ ಅವಶೇಷ?
ಚುನಾವಣೆಯ ಸಮಯದಲ್ಲಿ ನಿಮ್ಮ ಸರ್ಕಾರವನ್ನು ಕಿತ್ತು ಮೂಲೆಗೆ ಬಿಸಾಡುವ ಆಪರೇಷನ್ನ್ನು ಜನರೇ ಮಾಡಲಿದ್ದಾರೆ ಎಂದು ಸಿಎಂಗೆ ಅಶೋಕ್ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಸೋನಮ್ ವಾಂಗ್ಚುಕ್ ಶಾಲೆ ಬಂದ್ ಮಾಡಲು ಲಡಾಖ್ ಆಡಳಿತದಿಂದ ನೋಟಿಸ್
