– ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ
ನವದೆಹಲಿ: ಮಹಿಳಾ ಮೀಸಲು (Women’s Reservation Bill), ಕ್ಷೇತ್ರ ಮರುವಿಂಗಡಣೆ ಮಸೂದೆಗೆ (Delimitation Bill) ಜೆಡಿಎಸ್ (JDS) ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಹೆಚ್.ಡಿ ಕುಮಾರಸ್ವಾಮಿ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆಗೆ ಜೆಡಿಎಸ್ ಸಂಪೂರ್ಣ ಬೆಂಬಲವಿದೆ ಎಂದು ಹೆಚ್ಡಿಕೆ ತಿಳಿಸಿದರು. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪಾಸ್ ಆದ್ರೆ ದೇಶದಲ್ಲಿ ಉಳಿದಿರುವ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯ: ಕಪಿಲ್ ಸಿಬಲ್
30 ವರ್ಷಗಳ ಕನಸು ನನಸಾಗುವ ಕಾಲ ಈಗ ಬಂದಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳು 56ಕ್ಕೆ ಹೆಚ್ಚಳವಾಗಲಿವೆ. ಕ್ಷೇತ್ರ ಮರುವಿಂಗಡಣೆಯಿಂದ ಕನ್ನಡಿಗರ ಪ್ರಾತಿನಿಧ್ಯ ಹೆಚ್ಚಳವಾಗಲಿದೆ. ದಕ್ಷಿಣ ರಾಜ್ಯಗಳಿಗೂ ಅನ್ಯಾಯವಾಗಲ್ಲ. ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ 50% ಹೆಚ್ಚಳವಾಗಲಿದೆ ಎಂದರು.
ಈ ಬಗ್ಗೆ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಮಹಿಳಾ ಮೀಸಲು ಮಸೂದೆಗೆ ಎಲ್ಲಾ ಪಕ್ಷಗಳು ಬೆಂಬಲ ನೀಡಲಿ ಎಂದು ಮನವಿ ಮಾಡಿದರು.
ಚಂದ್ರಬಾಬು ನಾಯ್ಡು ಅವರು ಮಾತನಾಡಿ, ಈ ಎರಡು ಮಸೂದೆಗಳು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಐತಿಹಾಸಿಕ ನಿರ್ಧಾರವಾಗಿದೆ. ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ನ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದರು. ಇದನ್ನೂ ಓದಿ: ದಕ್ಷಿಣ ರಾಜ್ಯಗಳ ಷರತ್ತಿಗೆ ಮಣಿದ ಕೇಂದ್ರ| ಕ್ಷೇತ್ರ ಪುನರ್ವಿಂಗಡಣೆ ತಿದ್ದುಪಡಿಗೆ ಸಂಪುಟ ಅಸ್ತು; ಮಹಿಳಾ ಮೀಸಲಾತಿ ಜಾರಿಗೆ ಹಾದಿ ಸುಗಮ
