-ಪ್ರಮುಖ ಹಿಂದುತ್ವ ನಾಯಕ ಎಂದು ಬಣ್ಣಿಸಿದ ಶಿವಸೇನೆ ಸಂಸದ
ಲಕ್ನೋ: ಉತ್ತರ ಪ್ರದೇಶ (Uttara Pradesh) ವಿಧಾನಸಭಾ ಚುನಾವಣೆಯ ಹೊತ್ತಲ್ಲೇ ಶಿವಸೇನೆ ಸಂಸದ ಸಂಜಯ್ ರಾವತ್ (Sanjay Rawat) ಅವರು ಯೋಗಿ ಇಲ್ಲದಿದ್ದರೆ, ಉತ್ತರ ಪ್ರದೇಶ ಇಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಶ್ಲಾಘಿಸುವ ಮೂಲಕ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ದು, ಅವರನ್ನು ಪ್ರಮುಖ ಹಿಂದುತ್ವ ನಾಯಕ ಎಂದು ಕರೆದಿದ್ದಾರೆ. ಅವರು ಸಮರ್ಥ ನಾಯಕರಾಗಿದ್ದು, ತಮ್ಮ ರಾಜಕೀಯ ಸಾಮರ್ಥ್ಯದ ಬಗ್ಗೆ ಅವರಿಗೆ ವಿಶ್ವಾಸವಿದೆ. ನಾವೂ ಸಹ ಯೋಗಿ ಅವರನ್ನು ಪ್ರೀತಿಸುತ್ತೇವೆ. ಹೀಗಾಗಿ ಯೋಗಿ ಇಲ್ಲದಿದ್ದರೆ ಉತ್ತರ ಪ್ರದೇಶವಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮುಂಬೈ ಇಂಡಿಯನ್ಸ್ಗೆ ಮತ್ತೆ ‘ಹಿಟ್ಮ್ಯಾನ್’ ಸಾರಥ್ಯ: ನಾಯಕನಾಗಿ ರೋಹಿತ್ ಶರ್ಮಾ ಕಮ್ಬ್ಯಾಕ್
ಹೆಚ್ಚಿನ ಬಿಜೆಪಿ ಶಾಸಕರ ಬೆಂಬಲ ಯೋಗಿಗೆ ಇರಲಿದೆ:
2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂಬ ವಿಶ್ವಾಸ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಲ್ಲಿ ಕಾಣುತ್ತಿದೆ. ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಮತ್ತು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಭೆ ಸೇರಿದಾಗ ಅವರೆಲ್ಲರೂ ತಮಗೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಆದಿತ್ಯನಾಥ್ ಅವರಿಗಿದೆ. ಶಾಸಕಾಂಗ ಪಕ್ಷದ ನಾಯಕನನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಗೆದ್ದು ಬರುವ ಶಾಸಕರು ತಮ್ಮ ಪರವಾಗಿ ನಿಲ್ಲುತ್ತಾರೆ ಎಂಬ ಭರವಸೆ ಅವರಿಗಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಯ ಒಳಗೆ ಅಸಮಾಧಾನವಿದೆ ಎಂಬ ವರದಿಗಳನ್ನು ಸಂಜಯ್ ರಾವುತ್ ತಳ್ಳಿಹಾಕಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವಿರುವುದು ಸಾಮಾನ್ಯ. ಯಾವುದೇ ರಾಜಕೀಯ ಪಕ್ಷದಲ್ಲಿ ಪ್ರತಿಯೊಬ್ಬ ಸದಸ್ಯರೂ ತಮ್ಮ ನಾಯಕತ್ವದ ಬಗ್ಗೆ ತೃಪ್ತರಾಗಿರುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಮೋದಿ ಜೀ ಅವರ ಪಕ್ಷದಲ್ಲಿರುವ ಪ್ರತಿಯೊಬ್ಬರೂ ಅವರ ಬಗ್ಗೆ ಸಂತೋಷವಾಗಿದ್ದಾರೆಯೇ? ಅಮಿತ್ ಶಾ ಜೀ ಅವರ ಪಕ್ಷದಲ್ಲಿರುವ ಎಲ್ಲರೂ ಅವರ ಬಗ್ಗೆ ಖುಷಿಯಾಗಿದ್ದಾರೆಯೇ? ಖಂಡಿತವಾಗಿಯೂ ಇಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪಾಸ್ ಆದ್ರೆ ದೇಶದಲ್ಲಿ ಉಳಿದಿರುವ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯ: ಕಪಿಲ್ ಸಿಬಲ್
