ನವದೆಹಲಿ: ಗುಜರಾತ್ (Gujarat) ಭಯೋತ್ಪಾದನಾ ನಿಗ್ರಹ ದಳ ವಡೋದರಾದಲ್ಲಿ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ (Jaish E Mohammed) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕಿತ ವ್ಯಕ್ತಿಯನ್ನು ಬಂಧಿಸಿದೆ.
ಬಂಧಿತ ವ್ಯಕ್ತಿಯನ್ನು ಅಸ್ಸಾಂ (Assam) ಮೂಲದ ಮೊಹಮ್ಮದ್ ಸಹರುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ವಡೋದರಾ ಜಿಲ್ಲೆಯ ಜರೋದ್ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿಗೆ ಅಶ್ಲೀಲ ಮೆಸೇಜ್ – ಟಿವಿಕೆ ಶಾಸಕ ಅರೆಸ್ಟ್
ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ ಕುರಿತ ತನಿಖೆಯ ಭಾಗವಾಗಿ ಗುಜರಾತ್ ಎಟಿಎಸ್ ತಂಡವು ಜರೋದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ಬಂಧಿತನಿಂದ ಎಕೆ-47 ರೈಫಲ್ ಮತ್ತು 23 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ವಶಪಡಿಸಿಕೊಳ್ಳಲಾದ ರೈಫಲ್ ಹಾಗೂ ಜೀವಂತ ಗುಂಡುಗಳ ಮೂಲ ಹಾಗೂ ಉಗ್ರನ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ.
ಜೈಶ್-ಎ-ಮೊಹಮ್ಮದ್ ನಂಟಿನ ಬಗ್ಗೆ ಎಟಿಎಸ್ ತನಿಖೆ:
ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ, ಶಂಕಿತನಿಗೆ ಈ ಬಂದೂಕು ಮತ್ತು ಮದ್ದುಗುಂಡುಗಳು ಹೇಗೆ ಸಿಕ್ಕವು ಎಂಬುದರ ಕುರಿತು ಎಟಿಎಸ್ ತನಿಖೆ ನಡೆಸುತ್ತಿದೆ. ಜೊತೆಗೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಯೋಗಿ ಇಲ್ಲದಿದ್ದರೆ, ಉತ್ತರ ಪ್ರದೇಶ ಇಲ್ಲ – ಸಿಎಂ ಯೋಗಿ ಆದಿತ್ಯನಾಥ್ ಶ್ಲಾಘಿಸಿ ಅಚ್ಚರಿ ಮೂಡಿಸಿದ ಸಂಜಯ್ ರಾವತ್
ಕಳೆದ ಕೆಲವು ತಿಂಗಳುಗಳಲ್ಲಿ ಪಾಕಿಸ್ತಾನದಿಂದ ಹಲವಾರು ಭಯೋತ್ಪಾದಕರು ಒಳನುಸುಳಿರಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಹಾಗೂ ಭಯೋತ್ಪಾದಕ ಜಾಲಗಳನ್ನು ಪುನಶ್ಚೇತನಗೊಳಿಸಲು ಈ ಉಗ್ರರು ಯತ್ನಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆ ವಿದೇಶಿ ಉಗ್ರರನ್ನು ಗುರುತಿಸಿ ಪತ್ತೆಹಚ್ಚಲು ಮತ್ತು ಈ ಪ್ರದೇಶದಲ್ಲಿ ಅವರು ನೆಲೆಯೂರದಂತೆ ತಡೆಯಲು ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಶರದ್ ಪವಾರ್ ಬಣದ ಎನ್ಸಿಪಿಯಿಂದ ಬೆಂಬಲ ಘೋಷಣೆ
