ರಾಮನಗರ: ಖಾಸಗಿ ರೆಸಾರ್ಟ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಮಗು ದಾರುಣ ಸಾವನ್ನಪ್ಪಿರುವ ಘಟನೆ ರಾಮನಗರ (Ramanagara) ತಾಲೂಕಿನ ಹರಿಸಂದ್ರ ಗ್ರಾಮದ ಬಳಿ ನಡೆದಿದೆ.
ಮೂರೂವರೆ ವರ್ಷದ ಇವಾನ್ ಮೃತ ಮಗು. ಸ್ವಿಮ್ಮಿಂಗ್ ಪೂಲ್ನಲ್ಲಿ ಆಟವಾಡುತ್ತಿದ್ದಾಗ ದುರಂತ ಸಾವಿಗೀಡಾಗಿದೆ. ಮಣಿಪುರ ಮೂಲದ ಲೀನ್ ಮತ್ತು ಟ್ರೇಸಿ ದಂಪತಿಯ ಮಗು ಮೃತಪಟ್ಟಿದೆ.
ಬೆಂಗಳೂರಿನ ಕೊತ್ತನೂರು ಬಳಿ ಕುಟುಂಬ ವಾಸವಾಗಿದೆ. ಸುಮಾರು 40 ಜನರ ಜೊತೆ ರೆಸಾರ್ಟ್ಗೆ ಪ್ರವಾಸ ಬಂದಿದ್ದರು. ಈ ದಂಪತಿ ಪ್ರೈವೇಟ್ ಪೂಲ್ ವಿಥ್ ರೂಂನಲ್ಲಿ ಸ್ಟೇ ಆಗಿದ್ದರು.
ಈ ವೇಳೆ ಪ್ರೈವೇಟ್ ಪೂಲ್ನಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
