ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದ (Raghavendra Swamy Math) ಆಗಸ್ಟ್-ಸೆಪ್ಟೆಂಬರ್ ತಿಂಗಳಿನ 16 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಮಠದ ಇತಿಹಾಸದಲ್ಲೇ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ.
ಕೇವಲ 16 ದಿನದಲ್ಲಿ 3 ಕೋಟಿ 30 ಲಕ್ಷ 69,139 ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತೀ ತಿಂಗಳಿನಂತೆ ಈ ಬಾರಿಯೂ ಭಕ್ತರು ದಂಡು ಮಠಕ್ಕೆ ಹರಿದು ಬಂದಿದೆ. ಆದ್ರೆ ಗುರು ರಾಯರ 355ನೇ ಆರಾಧನಾ ಮಹೋತ್ಸವ ಹಿನ್ನೆಲೆ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, 16 ದಿನಗಳಲ್ಲೇ ಕೋಟ್ಯಂತರ ರೂ. ಕಾಣಿಕೆ ಸಂಗ್ರಹವಾಗಿದೆ. ಇದನ್ನೂ ಓದಿ: ದೆಹಲಿ ಪಿಜಿ ಕಟ್ಟಡ ದುರಂತದ ಬೆನ್ನಲ್ಲೇ ಎಚ್ಚೆತ್ತ ಪಾಲಿಕೆ – 27 ಕಟ್ಟಡ ತಕ್ಷಣವೇ ಕೆಡವಲು ಆದೇಶ
ಒಟ್ಟು ಕಾಣಿಕೆಯಲ್ಲಿ 3,20,66,639 ರೂ. ಕರೆನ್ಸಿ ನೋಟುಗಳು, 10,02,500 ರೂ. ನಾಣ್ಯಗಳು ಸಂಗ್ರಹವಾಗಿವೆ. 47 ಗ್ರಾಂ ಚಿನ್ನ, 632 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ. ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು. ಇದನ್ನೂ ಓದಿ: ʻಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಒಕ್ಕೂಟʼ; ಟಿವಿಕೆ – ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೊಸ ನಾಮಕರಣ

