ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಹಾಗೂ ಕಾಂಗ್ರೆಸ್ ಮೈತ್ರಿ ಕೂಟಕ್ಕೆ (TVK Congress Alliance) ಕೊನೆಗೂ ಹೊಸ ಹೆಸರು ಅಧಿಕೃತಗೊಂಡಿದೆ.
ಮುಖ್ಯಮಂತ್ರಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಮತ್ತು ಕಾಂಗ್ರೆಸ್, ಐಯುಎಂಎಲ್, ವಿಸಿಕೆ ಮತ್ತು ಎಂಡಿಎಂಕೆ ನಡುವಿನ ತಮಿಳುನಾಡಿನ ಆಡಳಿತ ಒಕ್ಕೂಟಕ್ಕೆ ʻಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಒಕ್ಕೂಟʼ (Secular Social Justice Victory Alliance) ಹೆಸರು ಅಂತಿಮಗೊಳಿಸಲಾಗಿದೆ.
மாண்புமிகு தமிழ்நாடு முதலமைச்சர், வெற்றித் தலைவர் அவர்கள் தலைமையில் தமிழக வெற்றிக் கழகத் தோழமைக் கட்சிகளின் நிர்வாகிகள் ஆலோசனைக் கூட்டம் இன்று சென்னையில் நடைபெற்றது.
இந்த ஆலோசனைக் கூட்டத்தில், தமிழ்நாட்டில் வாகை சூடும் வரலாறு படைத்த தமிழக வெற்றிக் கழகம் தலைமையிலான புதிய… pic.twitter.com/Zfpektvx45
— TVK Party HQ (@TVKPartyHQ) September 9, 2026
ಟಿವಿಕೆ ಮುಖ್ಯಸ್ಥ ವಿಜಯ್, ವಿಡುತಲೈ ಚಿರುತೈಗಲ್ ಕಚ್ಚಿ (VCK) ಮುಖ್ಯಸ್ಥ ಥೋಲ್ ತಿರುಮಾವಲವನ್, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಮುಖ್ಯಸ್ಥ ವೈಕೊ ಮತ್ತು ಐಯುಎಂಎಲ್ ನಾಯಕರು ಮೈತ್ರಿಕೂಟದಲ್ಲಿ ಇರಲಿದ್ದಾರೆ. ಮೈತ್ರಿ ಕೂಟಕ್ಕೆ ʻವಿಕ್ಟರಿʼ ಎಂಬ ಪದವನ್ನೂ ಸೇರಿಸಲಾಗಿದ್ದು, ಇದು ʻವಿಜಯ್ʼ ಎಂಬ ಪದವನ್ನ ಸೂಚಿಸುತ್ತದೆ. ಈ ಮೂಲಕ ತಮಿಳುನಾಡು ಸಿಎಂ ವಿಜಯ್ ಅವರ ಹೆಸರನ್ನೂ ಒಕ್ಕೂಟದ ಹೆಸರನೊಂದಿಗೆ ಸೇರಿಸಲಾಗಿದೆ ಎಂದು ಹೇಳಲಾಗ್ತಿದೆ.
ಬುಧವಾರ (ಇಂದು) ಚೆನ್ನೈನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ವಿಸಿಕೆ, ಎಂಡಿಎಂಕೆ ಮತ್ತು ಐಯುಎಂಎಲ್ ನಾಯಕರು ಭಾಗವಹಿಸಿದ ನಂತರ ಮೈತ್ರಿಕೂಟಕ್ಕೆ ಹೆಸರಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪನೈಯೂರ್‌ನಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ ಮಾಣಿಕ್ಕಂ ಟ್ಯಾಗೋರ್, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರವೀಣ್ ಚಕ್ರವರ್ತಿ ಮತ್ತು ವಿಧಾನಸಭಾ ನಾಯಕಿ ಥರಹೈ ಕತ್ಬರ್ಟ್ ಭಾಗವಹಿಸಿದ್ದರು. ಎಂಡಿಎಂಕೆ ನಾಯಕರಾದ ವೈಕೋ ಮತ್ತು ಅವರ ಪುತ್ರ ದುರೈ, ವಿಸಿಕೆ ಮುಖ್ಯಸ್ಥ ಥೋಲ್ ತಿರುಮಾವಲವನ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕರಾದ ಕೆ.ಎಂ. ಖಾದರ್ ಮೊಹಿದೀನ್, ಎ.ಎಂ. ಶಹಜಹಾನ್ ಮತ್ತು ಸೈಯದ್ ಫಾರೂಕ್ ಬಾಷಾ ಕೂಡ ಉಪಸ್ಥಿತರಿದ್ದರು.
ಕಳೆದ ಮೇ ತಿಂಗಳಲ್ಲಿ ತಮಿಳುನಾಡು ಸರ್ಕಾರ ರಚಿಸಿದ ನಂತರದ ಮಿತ್ರಪಕ್ಷಗಳ 2ನೇ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಡಪಕ್ಷಗಳ ನಾಯಕರು ಸಭೆಗೆ ಗೈರಾಗಿದ್ದರು. ಸರ್ಕಾರ ಬೆಂಬಲಿಸುವ ಸಿಪಿಐ(ಎಂ) ಮತ್ತು ಸಿಪಿಐ ಎರಡೂ ಪಕ್ಷಗಳು ಸಭೆಯಿಂದ ಸಭೆಗೆ ಹಿಂದೇಟು ಹಾಕಿದ್ದವು ಎಂದು ತಿಳಿದುಬಂದಿದೆ.
