ನವದೆಹಲಿ: ದಕ್ಷಿಣ ದೆಹಲಿಯ (South Delhi) ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು (Building Collapsed) ಏಳು ಮಂದಿ ಸಾವನ್ನಪ್ಪಿದ ಬೆನ್ನಲ್ಲೇ, ದೆಹಲಿ ಮಹಾನಗರ ಪಾಲಿಕೆ ಅಕ್ರಮ ಕಟ್ಟಡ ನಿರ್ಮಾಣಗಳ ವಿರುದ್ಧ ಸಮರ ಸಾರಿದೆ.
ಸತ್ಯ ನಿಕೇತನದಲ್ಲಿ ಕುಸಿದುಬಿದ್ದ ಕಟ್ಟಡದ ಪಕ್ಕದಲ್ಲೇ ಇದ್ದ ಮತ್ತೊಂದು ದುರ್ಬಲಗೊಂಡ ಪಿಜಿ ಕಟ್ಟಡವನ್ನ ಅಪಾಯಕಾರಿ ಎಂದು ಘೋಷಿಸಿ, ಬುಲ್ಡೋಜರ್ ಬಳಸಿ ಹಂತ ಹಂತವಾಗಿ ಉರುಳಿಸಲಾಗುತ್ತಿದೆ.

ಒಟ್ಟು 51 ಕಟ್ಟಡಗಳು ಅಪಾಯಕಾರಿ ಮತ್ತು ಶಿಥಿಲ ಅಂತ ಕಂಡುಬಂದಿದೆ. ಈ ಪೈಕಿ 27 ಕಟ್ಟಡಗಳನ್ನ ತಕ್ಷಣವೇ ಕೆಡವಲು ಆದೇಶ ನೀಡಲಾಗಿದೆ. 7 ಕಟ್ಟಡಗಳನ್ನ ಸೀಲ್ ಮಾಡಲಾಗಿದೆ ಮತ್ತು 35 ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ದೆಹಲಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿನ ಪಿಜಿಗಳ ಸುರಕ್ಷತೆ ಮತ್ತು ಅಕ್ರಮ ನಿರ್ಮಾಣಗಳ ಬಗ್ಗೆ ತನಿಖೆ ನಡೆಸಲು ಜಂಟಿ ಆಡಿಟ್ ತಂಡಗಳನ್ನು ರಚಿಸಲಾಗಿದೆ.
