– ಸತ್ಯ ಹೇಳಿದ್ರೆ ಕೊಂದು ಬಿಡ್ತಾರೆ ಅನ್ನೋ ಭಯ ಅವರಲ್ಲಿದೆ
ಬಳ್ಳಾರಿ: ಮುಸ್ಲಿಂ ಧರ್ಮದಲ್ಲಿ ನಾಲ್ಕೈದು ಮದುವೆ ಆಗುವ ಅವಕಾಶ ಇದೆ. ನಾಲ್ಕೈದು ಮದುವೆ ಆಗುವ ಆಸೆಯಿಂದ ಮುಸ್ಲಿಂ ಧರ್ಮ ಶ್ರೇಷ್ಠವೆಂದು ರಾಯರೆಡ್ಡಿ ಹೇಳಿರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (C T Ravi) ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲೇ ಇಸ್ಲಾಂ ಧರ್ಮ ಶ್ರೇಷ್ಠವೆಂದು ರಾಯರೆಡ್ಡಿ ಹೇಳಿದ್ದಾರೆ. ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಇವೆಲ್ಲವೂ ಮತಗಳು. ಇವೆಲ್ಲವೂ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟಿವೆ. ಸನಾತನ ಅನ್ನೋದು ಜಗತ್ತಿನಲ್ಲೇ ಶ್ರೇಷ್ಠವಾದ ಧರ್ಮವಾಗಿದೆ. ಮುಸ್ಲಿಂ ಧರ್ಮದಲ್ಲಿ ಪ್ರಶ್ನಿಸೋದಕ್ಕೆ ಅವಕಾಶವೇ ಇಲ್ಲ. ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ನಾಶ ಮಾಡೋದಕ್ಕೆ ಬಂದೋರೆಲ್ಲ ನಾಶವಾಗಿ ಹೋಗಿದ್ದಾರೆ ಎಂದು ಹೇಳಿದರು.
ಮುಸ್ಲಿಂ ಧರ್ಮದಲ್ಲಿ ಸತ್ತ ಮೇಲೆ ಸ್ವರ್ಗದಲ್ಲಿ 73 ಕನ್ಯೆಯರು ಸಿಗುತ್ತಾರೆ ಎಂದೆಲ್ಲಾ ಹೇಳುತ್ತಾರೆ. ಇಲ್ಲಿ ಸಾಯುವ ಮೊದಲು ಸಿಗದಿದ್ದು ಸತ್ತ ಮೇಲೆ ದುರಾಸೆ ಇಡೇರಲಿ ಎಂಬ ಆಸೆ ರಾಯರೆಡ್ಡಿ ಅವರಿಗೆ ಇರಬಹುದು. ಅಬೇಂಡ್ಕರ್ ಬರೆದಿರುವ ʼಮೈ ಥಾಟ್ಸ್ ಆಫ್ ಪಾಕಿಸ್ತಾನ್ʼ ಪುಸ್ತಕವನ್ನು ಒಮ್ಮೆ ಓದಿ. ಅದರಲ್ಲಿ ಹೇಗೆ ಮಹಿಳೆಯರ ಶೋಷಣೆಯಾಗುತ್ತದೆ? ಹೇಗೆ ಬುರ್ಕಾ ಮಹಿಳೆಯರನ್ನು ಶೋಷಣೆ ಮಾಡುತ್ತೆ? ಎಂಬುವುದರ ಬಗ್ಗೆ ಬರೆದಿದ್ದಾರೆ. ಮನುಸ್ಮೃತಿ ಮಹಿಳೆಯನ್ನ ಇನ್ನೊಬ್ಬರ ಮೇಲೆ ಅವಲಂಬನೆಯಾಗುವ ರೀತಿ ಮಾಡುತ್ತೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ರಾಹುಲ್ ಗಾಂಧಿ ಆಗಾಗ ಎಡಬಿಡಂಗಿ ತರ ಮಾತನಾಡುತ್ತಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಇಲಾಖೆ AEE ಹುದ್ದೆಯಲ್ಲಿ ಅಕ್ರಮಕ್ಕೆ ಖಂಡನೆ – ಕೆಪಿಸಿಸಿ ಕಚೇರಿ ಎದುರು ಜೆಡಿಎಸ್ ಹೈಡ್ರಾಮಾ
ಮುಸ್ಲಿಂ ಧರ್ಮದಲ್ಲಿ ಮಹಿಳೆಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುವುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ಪ್ರಮಖವಾಗಿ ಇಸ್ಲಾಂ ತತ್ವ ಕಾರಣ. ಗೂಗಲ್ ಸರ್ಚ್ ಮಾಡಿ ನೋಡಿದರೆ ಭಯೋತ್ಪಾದನೆಗೆ ಇಸ್ಲಾಂ ಚಿಂತನೆಗಳೇ ಕಾರಣ ಎಂದು ಹೇಳುತ್ತೆ. ಭಯೋತ್ಪಾದಕರಿಗೆ ಭಯಗೊಂಡು ಬಸವರಾಜ್ ರಾಯರೆಡ್ಡಿ ಇಸ್ಲಾಂ ಧರ್ಮ ಶ್ರೇಷ್ಠ ಅಂತ ಹೇಳಿರಬಹುದು. ಸುಳ್ಳು ಹೇಳಿದ್ರೆ ನನ್ನನ್ನ ಭಯೋತ್ಪಾದಕರು ಬಿಟ್ಟು ಬಿಡುತ್ತಾರೆ. ಸತ್ಯ ಹೇಳಿದ್ರೆ ಎಲ್ಲಿ ನನ್ನನ್ನೂ ಕೊಂದು ಬಿಡುತ್ತಾರೋ ಅನ್ನೋ ಭಯದಿಂದ ಹೇಳಿದ್ದಾರೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.ಇದನ್ನೂ ಓದಿ: ಒಂದೇ ಮನೆಯಲ್ಲಿ 23 ಮೃತದೇಹಗಳು ಪತ್ತೆ! – ನೇಪಾಳ ಪ್ರವಾಹದ ಭೀಕರತೆಗೆ ಬೆಚ್ಚಿಬಿದ್ದ ರಕ್ಷಣಾ ತಂಡ
