ಬೆಂಗಳೂರು: ಸಚಿವ ಜಮೀರ್ ಅಹ್ಮದ್ (Zameer Ahmed) ಅವರಿಂದು (ಸೆ.2) ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ಮಾಜಿ ಶಾಸಕ ರಮೇಶ್ ಕುಮಾರ್ ಹಾಗೂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಸಾಥ್ ನೀಡಿದ್ದಾರೆ.
ಮೂವರು ಒಟ್ಟಿಗೆ ಸಿಎಂ ಅವರನ್ನು ಭೇಟಿ ಮಾಡಿದ್ದು, ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಹೊರಗೆ ಬಂದ ಜಮೀರ್ ಅಹ್ಮದ್, ರಮೇಶ್ ಕುಮಾರ್ ಹಾಗೂ ಪೊನ್ನಣ್ಣ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಮೂವರು ಒಟ್ಟಿಗೆ ಸಿಎಂ ಅವರನ್ನು ಭೇಟಿಯಾಗಿದ್ದು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಆಹಾರ ಸುರಕ್ಷತೆ ಬಗ್ಗೆ ಕಳವಳ – ಪಿಜಿಗಳಲ್ಲಿ ತಪಾಸಣೆಗೆ ಸಚಿವ ಯು.ಟಿ ಖಾದರ್ ಸೂಚನೆ

ನಿನ್ನೆಯಷ್ಟೇ (ಸೆ.1) ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ರಾಜಣ್ಣ ಅವರು ಜಮೀರ್ ಅವರನ್ನು ಭೇಟಿಯಾಗಿದ್ದರು. ಜೊತೆಗೆ ರಮೇಶ್ ಕುಮಾರ್ ಕೂಡ ಭೇಟಿ ಮಾಡಿ, ಮೂವರು ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ರಮೇಶ್ ಕುಮಾರ್ ಜೊತೆ ಜಮೀರ್ ಸಿಎಂ ಅವರನ್ನು ಭೇಟಿ ಮಾಡಿರುವುದು ಕೂತುಹಲ ಮೂಡಿಸಿದೆ.
ಇನ್ನು ಭೇಟಿ ಬಳಿಕ ಜಮೀರ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಮುಖ್ಯಮಂತ್ರಿಗಳನ್ನು ಭೇಟಿ ಮಾಡದೇ ಇನ್ಯಾರನ್ನ ಭೇಟಿ ಮಾಡಕ್ಕಾಗುತ್ತೆ ಎಂದು ಜಾರಿಕೊಂಡಿದ್ದಾರೆ.ಇದನ್ನೂ ಓದಿ: KPSC Scam | 6 ಮಾದರಿ ಪ್ರಶ್ನೆಪತ್ರಿಕೆ ಮನೆಯಲ್ಲೇ ಪರಿಶೀಲನೆ ಮಾಡ್ತಿದ್ದೆ – ಸಿಐಡಿ ಮುಂದೆ ಗ್ಯಾನೇಂದ್ರ ಸ್ಫೋಟಕ ಹೇಳಿಕೆ
