ಕಾರವಾರ: ಹೂಳು ಮತ್ತು ಅಲೆಗಳ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು (Boat) ಸಮುದ್ರದ ಅಳವೆಯಲ್ಲಿ ಮುಳಗಿ ಹೋಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರನ್ನ (Fishermen) ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ (Gokarna) ಭಾಗದ ತದಡಿ ಬಂದರಿನಲ್ಲಿ ನಡೆದಿದೆ.
ಸುರೇಂದ್ರ ಹರಿಕಂತ್ರ ಎನ್ನುವವರಿಗೆ ಸೇರಿದ ಲಕ್ಷ್ಮೀಕೃಪ ಎನ್ನುವ ಹೆಸರಿನ ಬೋಟ್ ಇದಾಗಿದ್ದು, ಇಂದು ಗೋಕರ್ಣದ ತದಡಿಯ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೇ ಸ್ವಲ್ಪ ದೂರದಲ್ಲೇ ಹೂಳು ತುಂಬಿದ ಅಳವೆಯಲ್ಲಿ ಸಿಲುಕಿಕೊಂಡಿದ್ದು, ಅಲೆಗಳ ಹೊಡೆತಕ್ಕೆ ತಳಭಾಗದಲ್ಲಿ ಹಾನಿಯಾಗಿ ಮುಳುಗಿದೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಹಾನಿಯಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಮಹಿಳೆ, ಇಬ್ಬರು ಮಕ್ಕಳು ಅನುಮಾನಾಸ್ಪದ ಸಾವು – ಕೊಲೆ ಶಂಕೆ
ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಶ್ರೀದೇವಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ತದಡಿಯ ಅಳಿವೆಯ ಹೂಳಿನಿಂದ ಪದೇಪದೇ ಇದೇ ಜಾಗದಲ್ಲಿ ಬೋಟುಗಳು ಮುಳುಗುತಿದ್ದು, ಒಂದೇ ವಾರದಲ್ಲಿ ಎರಡು ಬೋಟ್ ಮುಳುಗಡೆಯಾಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡಬೇಡಿ: ತನ್ನ ನಾಗರಿಕರಿಗೆ ಪಾಕ್ ಖಡಕ್ ಎಚ್ಚರಿಕೆ

