ಸನಾ: ಸೌದಿ ಅರೇಬಿಯಾದ(Saudi Arabia) ಎರಡು ಬೃಹತ್ ತೈಲ ನೌಕೆಗಳ (Oil Tankers) ಮೇಲೆ ದಾಳಿ ನಡೆಸಿದ್ದು ನಾವೇ ಎಂದು ಇರಾನ್ ಬೆಂಬಲಿತ ಯೆಮೆನ್‌ನ ಹೌತಿ(Houthis) ಬಂಡುಕೋರರು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಸೌದಿ ಅರೇಬಿಯಾಕ್ಕೆ ಸೇರಿದ ಎರಡು ಪ್ರಮುಖ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು ಹಾಗೂ ಡ್ರೋನ್‌ಗಳ(Drone) ಮೂಲಕ ಯಶಸ್ವಿ ದಾಳಿ ನಡೆಸಲಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.ಈ ಘಟನೆಯಿಂದಾಗಿ ಕೆಂಪು ಸಮುದ್ರ(Red Sea) ಮತ್ತು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
BIG: First Saudi oil tanker reportedly hit by Houthi missile near Yemen, engulfed in flames. pic.twitter.com/R3nG7FSdW1
— Clash Report (@clashreport) July 22, 2026
ಗಾಜಾದ ಮೇಲಿನ ಇಸ್ರೇಲ್ ಸೇನಾ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೀನ್ ಜನರಿಗೆ ಬೆಂಬಲ ಸೂಚಿಸುವ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಹೌತಿಗಳು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಬ್ಯಾರಲ್‌ಗೆ 96 ಡಾಲರ್‌ಗೆ ಜಿಗಿತ – ಶೀಘ್ರವೇ 100 ಡಾಲರ್ ತಲುಪುವ ಸಾಧ್ಯತೆ
