ಬರ್ಮಿಂಗ್ಹ್ಯಾಮ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Women’s T20 WC 2026) ಪಂದ್ಯದಲ್ಲಿ ಇಂದು (ಜೂ.14) ಬದ್ಧವೈರಿಗಳಾದ ಪಾಕಿಸ್ತಾನ ಮತ್ತು ಭಾರತ ಮಹಿಳಾ (India vs Pakistan) ಪಡೆಗಳು ಸೆಣೆಸಾಟ ನಡೆಸಲಿವೆ.
ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೆ ದೊಡ್ಡ ಪ್ರೇಕ್ಷಕರ ದಂಡು ಹರಿದುಬರುವ ಸಾಧ್ಯತೆಯಿದೆ. ಎರಡೂ ತಂಡಗಳಿಗೂ ಇದು ಮೊದಲ ಪಂದ್ಯವಾಗಿರುವುದರಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಕಾಣಲು ಎದುರು ನೋಡುತ್ತಿವೆ. ಉಭಯ ತಂಡಗಳ ನಡುವೆ ಹೈ-ವೋಲ್ಟೇಜ್ ಕದನ ಏರ್ಪಡುವ ಸಾಧ್ಯತೆಯಿದೆ. ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಬ್ರಾರ್, ಹರ್ಷ್ ಮಿಂಚು – ಗಿಲ್ ಸೂಪರ್ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ
ಭಾರತ ಮಹಿಳಾ ತಂಡ 2009ರಿಂದ ಸತತವಾಗಿ ಟಿ20ಐಗಳಲ್ಲಿ ಪಾಕ್ ವಿರುದ್ಧ ಮೇಲುಗೈ ಸಾಧಿಸುತ್ತಾ ಬಂದಿದೆ. ಈವರೆಗೆ ಒಟ್ಟು 16 ಪಂದ್ಯಗಳು ನಡೆದಿದ್ದು, 13 ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆದ್ದಿದ್ದ ಭಾರತ ಮಹಿಳಾ ತಂಡದ ಗುರಿ ಇದೀಗ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಎಡ್ಜ್ಬಾಸ್ಟನ್ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಉತ್ತಮವಾಗಿದೆ. ಇಲ್ಲಿ ರನ್ಹೊಳೆ ಹರಿಯುವ ಸಾಧ್ಯತೆಯಿದೆ. ಜೊತೆಗೆ ಪಂದ್ಯ ಸಾಗಿದಂತೆ ಪಿಚ್ ಸ್ಲೋ ಆಗಲಿದ್ದು, ಬೌಲರ್ಗಳು ಕೂಡ ತಮ್ಮ ಪ್ರಾಬಲ್ಯ ಮೆರೆಯಬಹುದು. ವಿಶೇಷವಾಗಿ ಸ್ಪಿನ್ನರ್ಗಳು ಪರಿಣಾಮಕಾರಿ ಪ್ರದರ್ಶನ ನೀಡುವ ಸಾಧ್ಯತೆ ಹೆಚ್ಚಿದೆ.
ಸಂಭಾವ್ಯ ಆಡುವ ಬಳಗ:
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ನಂದನಿ ಶರ್ಮಾ, ರಾಧಾ ಯಾದವ್. ಇದನ್ನೂ ಓದಿ: ಮತ್ತೊಬ್ಬ ಬೇಬಿ ಬಾಸ್ ಎಂಟ್ರಿ – ಶತಕ ಸಿಡಿಸಿ ಧೂಳೆಬ್ಬಿಸಿದ ವೈಭವ್ ಸೂರ್ಯವಂಶಿ ಸಹೋದರ
ಪಾಕಿಸ್ತಾನ: ಮುನೀಬಾ ಅಲಿ, ಗುಲ್ ಫಿರೋಜಾ, ಆಯೇಶಾ ಜಾಫರ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ಸೈರಾ ಜಬೀನ್, ನತಾಲಿಯಾ ಪರ್ವೈಜ್, ತುಬಾ ಹಸನ್, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ನಶ್ರಾ ಸಂಧು.
