ನವದೆಹಲಿ: ದೇಶದ 9.34 ಕೋಟಿಗೂ ಅಧಿಕ ರೈತರಿಗೆ ಇಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ (PM KISAN) ಯೋಜನೆಯ 24ನೇ ಕಂತಿನ ಹಣ ವರ್ಗಾವಣೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಇಂದು ಬೆಳಗ್ಗೆ 10 ಗಂಟೆಗೆ ಗುಜರಾತ್ನ ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ಹಣ ಬಿಡುಗಡೆಯಾಗಲಿದೆ. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂಪಾಯಿ ನೇರ ಜಮೆಯಾಗಲಿದೆ.
ಒಟ್ಟು 18,690 ಕೋಟಿ ರೂಪಾಯಿಗೂ ಅಧಿಕ ಮೊತ್ತ ವರ್ಗಾವಣೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 6,000 ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಇದನ್ನೂ ಓದಿ: ಗೋಹತ್ಯೆ ಮಾಡಿದ್ದ ಮೂವರಿಗೆ ಜೀವಾವಧಿ ಶಿಕ್ಷೆ; ತೀರ್ಪಿನಲ್ಲಿ ಮನುಸ್ಮೃತಿ ಉಲ್ಲೇಖಿಸಿದ ಕೋರ್ಟ್
ಮೂರು ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಹಣ ಪಾವತಿ ಮಾಡಲಾಗುವುದು. ಈ ಹಿಂದೆ ಜೂನ್ 20ರಂದು 23ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಇ-ಕೆವೈಸಿ, ಆಧಾರ್ ಜೋಡಣೆ ಹಾಗೂ ಭೂ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿದ ಅರ್ಹ ರೈತರಿಗೆ ಮಾತ್ರ ಹಣ ಲಭ್ಯವಾಗಲಿದೆ.
