ಬಿಗ್ಬಾಸ್ ಮನೆಯಲ್ಲಿ ಈ ವಾರ ಶೆಟ್ಟಿ ಡಾನ್ ಸ್ವಯಂವರ ನಡೆಯುತ್ತಿದ್ದು, ಕೊನೆಗೆ ಯಶಸ್ (Yashas Krishna) ಮನವೊಲಿಕೆಗೆ ಸೌಂದರ್ಯ ಶೆಟ್ಟಿ (Soundarya Shetty) ಫಿದಾ ಆಗಿದ್ದಾರೆ.
ಬಿಗ್ಬಾಸ್ ಆಯ್ಕೆಯ ಇಬ್ಬರು ವರರಾದ ಗಗನ್ ಹಾಗೂ ಯಶಸ್ ಜೊತೆಗೆ ಸೌಂದರ್ಯ ಶೆಟ್ಟಿ ಡೇಟ್ ಮಾಡಿದ್ದರು. ರಕ್ಷಿತಾ ಶೆಟ್ಟಿ ಕೂಡ ಇವರೊಂದಿಗೆ ಕುಳಿತು ತನ್ನ ಅಕ್ಕನಿಗೆ ಒಪ್ಪುವ ಹಾಗೂ ಒಳ್ಳೆಯ ಬಾವವನ್ನು ಆಯ್ಕೆ ಮಾಡಲು ಚಾಲಾಕಿತನ ತೋರಿಸುತ್ತಿದ್ದರು. ಗಗನ್ ಹಾಗೂ ಯಶಸ್ ಬೇರೆ ಬೇರೆ ಪ್ಲ್ಯಾನ್ ಮಾಡಿ, ಸೌಂದರ್ಯ ಶೆಟ್ಟಿ ಮನವೊಲಿಸಲು ಯತ್ನಿಸಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ – ‘ಪ್ರಶಾಂತಿ’ಯ ಮಲೇಷ್ಯಾ ಲವ್ ಗುಟ್ಟು ರಟ್ಟು
ಭಾವನ್ನ selection ಮಾಡೋದ್ರಲ್ಲಿ ರಕ್ಷಿತಾ ಎತ್ತಿದ ಕೈ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/xIjYoyNPU9
— Colors Kannada (@ColorsKannada) October 29, 2026
ಶೆಟ್ಟಿ ಡಾನ್ಗೆ ಡ್ಯಾನ್ಸ್ ಅಂದರೆ ಇಷ್ಟ. ಹೀಗಾಗಿ ಡ್ಯಾನ್ಸ್ ಮಾಡಿ ಮೆಚ್ಚಿಸಬೇಕೆಂದು ಬಿಗ್ಬಾಸ್ವೊಂದು ಟಾಸ್ಕ್ ಕೊಟ್ಟಿದ್ದರು. ಅದರಂತೆ ವರರಾದ ಗಗನ್ ಹಾಗೂ ಯಶಸ್ ಅದ್ಭುತವಾಗಿ ಡ್ಯಾನ್ಸ್ ಮಾಡಿದರು. ಜೊತೆಗೆ ಸೌಂದರ್ಯ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ, ಎರಡೂ ಮನೆಯವರು, ಕೊನೆಗೆ ಶೆಟ್ಟಿ ಡಾನ್ ತಂದೆ, ತಾಯಿ ಕೂಡ ಕುಣಿದು ಕುಪ್ಪಳಿಸಿದರು. ನಿಜಕ್ಕೂ ಮನೆಯಲ್ಲಿ ಒಂದು ಮದುವೆ ಸಂಭ್ರಮ ಎಂಬಂತೆಯೇ ಡ್ಯಾನ್ಸ್ ಮಾಡಿದರು.
ಕೊನೆಗೆ ಶೆಟ್ಟಿ ಡಾನ್ ಯಶ್ ಅವರ ಮನವೊಲಿಕೆಗೆ ಫಿದಾ ಆಗಿದ್ದು, ತಮ್ಮ ಹೃದಯವನ್ನು ಯಶಸ್ಗೆ ನೀಡಿದ್ದಾರೆ. ಈ ಮೂಲಕ ಯಶಸ್, ತಾಂಡವ್ ರಾಮ್, ಸೋನಿಕಾ, ಗಾನವಿ, ಕುಮಾರಿ, ಜಗದೀಶ್ ಈ ವಾರದ ಕ್ಯಾಪ್ಟನ್ಸಿ ರೇಸ್ನಲ್ಲಿದ್ದಾರೆ.ಇದನ್ನೂ ಓದಿ: ದೊಡ್ಮನೆಯಲ್ಲಿ `ಶೆಟ್ಟಿ ಡಾನ್’ ಸ್ವಯಂವರ – ವಧು ಸೌಂದರ್ಯಗೆ ವರನಾಗಲು ಹುಡುಗರ ಕಸರತ್ತು
