ಬಿಗ್ಬಾಸ್ (Bigg Boss) ಮನೆಯಲ್ಲಿ ಈ ವಾರ ಮತ್ತೊಂದು ಮಾಸ್, ಕಾಮಿಡಿ ಹಾಗೂ ಮನರಂಜನೆಯ ಪರ್ವ ಆರಂಭವಾಗಿದೆ. ಮನೆಯ ಖಡಕ್ ಬೆಡಗಿ ಸೌಂದರ್ಯಗೆ (Soundarya Shetty) ಮದುವೆ ಮಾಡಿಸಲು ಬಿಗ್ಬಾಸ್ ಅದ್ಧೂರಿ ಟಾಸ್ಕ್ ಒಂದನ್ನು ನೀಡಿದ್ದು, ಇಡೀ ಮನೆ ಈಗ ಮದುವೆ ದರ್ಬಾರ್ ಆಗಿ ಬದಲಾಗಿದೆ.
ಟಾಸ್ಕ್ ನೀಡಿರುವಂತೆ, ಸಾಮಾನ್ಯ ಹೆಣ್ಣುಮಕ್ಕಳಂತೆ ನಾಚುತ್ತಾ ಕೂರುವ ಜಾಯಮಾನ ಈಕೆಯದ್ದಲ್ಲ. ಕೈಯಲ್ಲಿ ಮಚ್ಚು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ರಾಜಗಾಂಭೀರ್ಯದ ಸಿಂಹಾಸನದಲ್ಲಿ ಕುಳಿತಿರುವುದು `ಶೆಟ್ಟಿ ಡಾನ್’. ಸೌಂದರ್ಯಗೆ ಮದುವೆ ಎಂದರೆ ಕಿಂಚಿತ್ತೂ ಇಷ್ಟವಿಲ್ಲ. ಮಗಳ ಖಡಕ್ ಅವತಾರಕ್ಕೆ ಹೆದರಿದ ತಂದೆ-ತಾಯಿ, ಹೇಗಾದರೂ ಮಾಡಿ ಮಗಳಿಗೆ ಗಂಡು ಹುಡುಕಿ ಮದುವೆ ಮಾಡಿಸಲೇಬೇಕೆಂದು ಪಣತೊಟ್ಟಿದ್ದಾರೆ. ಇದನ್ನೂ ಓದಿ: ರೈಲಿನ ಡ್ರೈವರ್ ಆದವ್ರ ಕೈಗೆ ನಾಮಿನೇಷನ್ ಪವರ್ – ದೊಡ್ಮನೆಯಲ್ಲಿ ಶುರುವಾಯ್ತು ಫೈಟ್
ಶೆಟ್ಟಿ Don ಒಪ್ಪೋದು ಅಷ್ಟು ಸುಲಭ ಅಲ್ಲ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/h1x6EcaOxC
— Colors Kannada (@ColorsKannada) October 27, 2026
ಇತ್ತ ಶೆಟ್ಟಿ ಡಾನ್ ಅನ್ನು ಒಲಿಸಿಕೊಳ್ಳಲು ಮನೆಯ ಯುವಕರು ಒಬ್ಬೊಬ್ಬರಾಗಿ ವರರಾಗಿ ಎಂಟ್ರಿ ಕೊಟ್ಟಿದ್ದಾರೆ. ಒಂದೆಡೆ ಯಶಸ್, ಇನ್ನೊಂದೆಡೆ ಗಗನ್ ಸೌಂದರ್ಯಳನ್ನು ಮದುವೆಯಾಗಲು ಮನವೊಲಿಸುತ್ತಿದ್ದಾರೆ.
ಸೌಂದರ್ಯ ಶೆಟ್ಟಿ ವಧು. ತಾಂಡವ್ ಆಕೆಯ ತಂದೆಯಾಗಿ ಹಾಗೂ ಪ್ರಶಾಂತ್ ತಾಯಿಯ ಪಾತ್ರದಲ್ಲಿದ್ದಾರೆ. ಇನ್ನೂ ವರ ಯಶಸ್ ಕೃಷ್ಣ ಅವರ ಸೋನಿಕಾ, ತಂದೆಯಾಗಿ ಜಗದೀಶ್ ಹಾಗೂ ಕುಮಾರಿ, ಗಾನವಿ ಯಶಸ್ ಕುಟುಂಬಸ್ಥರಾಗಿದ್ದಾರೆ. ಇನ್ನೂ ವರ ಗಗನ್ ಅವರ ತಂದೆಯಾಗಿ ಕಿರಣ್ ಶಾಸ್ತಿç, ಆಸಿಯಾ, ಧನುಷ್ ಕುಟುಂಬಸ್ಥರ ಪಾತ್ರದಲ್ಲಿದ್ದಾರೆ.
ಮಗಳ ಮದುವೆ ಮಾತುಕತೆಯಲ್ಲಿ ಮನೆಯ ಹಿರಿಯರ ಹಾಸ್ಯ ಚಟಾಕಿ, ಮನವೊಲಿಸಲು ವರಗಳ ಡೈಲಾಗ್ ಹಾಗೂ ಸೌಂದರ್ಯ ಅವರ ಖಡಕ್ ನಗು ನೋಡುಗರ ಹೊಟ್ಟೆ ಹುಣ್ಣಾಗಿಸುವಂತೆ ಮಾಡಿದೆ. ಕೊನೆಗೆ ಈ ಮಾಸ್ `ಶೆಟ್ಟಿ ಡಾನ್’ ಯಾರ ಕೊರಳಿಗೆ ಮಾಲೆ ಹಾಕುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: BlockBuster Entertainment Of The Week – ಸೌಂದರ್ಯ, ತಾಂಡವ್ಗೆ ಈ ವಾರದ ಕಿಚ್ಚನ ಚಪ್ಪಾಳೆ
ಶೆಟ್ಟಿ ಡಾನ್ marriage story!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/AjBYN9wlzE
— Colors Kannada (@ColorsKannada) October 27, 2026
