ಬೆಂಗಳೂರು: ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಹೆಚ್ಡಿಕೆ, ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣ ಆಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮಿಸ್ಟರ್ ತುಘಲಕ್.. ವಿಷಯಾಂತರ ಕಿಡಿಗೇಡಿಗಳ ಲಕ್ಷಣ. ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ? ನೇರವಾಗಿ ಯುದ್ಧ ಮಾಡಿ. ಪಲಾಯನ ಏಕೆ? ಪಡಿಪಾಟಲು ಯಾಕೆ? ಇದನ್ನೂ ಓದಿ: MLC ಚುನಾವಣೆ ಸೋತಿದ್ದಕ್ಕೆ ಸಿಎಂ ಹಾಲಿನ ದರ ಏರಿಕೆ ನಿರ್ಧಾರ ಮಾಡಿದಂತೆ ಕಾಣಿಸ್ತಿದೆ – ವಿಜಯೇಂದ್ರ
ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣ ಆಗಿದ್ದಾರೆ.
ಮಿಸ್ಟರ್ ತುಘಲಕ್..
ವಿಷಯಾಂತರ ಕಿಡಿಗೇಡಿಗಳ ಲಕ್ಷಣ. ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ? ನೇರವಾಗಿ ಯುದ್ಧ ಮಾಡಿ. ಪಲಾಯನ ಏಕೆ? ಪಡಿಪಾಟಲು ಯಾಕೆ?ಸುಳ್ಳುಸುದ್ದಿ ಶೂರ..
ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ? ನೀವು, ನಿಮ್ಮಪ್ಪ, ನಿಮ್ಮ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್!! ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ. ಅರೆರೆ.. ಎಂಥಾ ಐನಾತಿ ಐಡಿಯಾ? ಅತಿಜಾಣ ಗ್ರಹಣ ಮಂತ್ರಿ!!ನನ್ನ ಅನುಮಾನ ಏನೆಂದರೆ, ನಿಮ್ಮ ತನಿಖೆಯೇ ಸ್ಟಿಂಗ್ ಆಗುತ್ತಿದೆ! ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ.
ರೀ ತುಘಲಕ್..
ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ.#KarnatakaStingSarkar
#StingSamrat
#Stingpin
#Stingprotector@JanataDal_S
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 30, 2026
ಸುಳ್ಳುಸುದ್ದಿ ಶೂರ.. ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ? ನೀವು, ನಿಮ್ಮಪ್ಪ, ನಿಮ್ಮ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್!! ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ. ಅರೆರೆ.. ಎಂಥಾ ಐನಾತಿ ಐಡಿಯಾ? ಅತಿಜಾಣ ಗ್ರಹಣ ಮಂತ್ರಿ!! ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಕೇಸ್ ಮುಚ್ಚಿಹಾಕಿ ಅಂತಾ ಕಾಂಗ್ರೆಸ್ ಹೈಕಮಾಂಡ್ ಸಿಎಂಗೆ ಹೇಳಿದೆ: ಆರ್. ಅಶೋಕ್
ನನ್ನ ಅನುಮಾನ ಏನೆಂದರೆ, ನಿಮ್ಮ ತನಿಖೆಯೇ ಸ್ಟಿಂಗ್ ಆಗುತ್ತಿದೆ! ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ. ರೀ ತುಘಲಕ್.. ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ ಎಂದು ಕೇಂದ್ರ ಸಚಿವ ಟಾಂಗ್ ಕೊಟ್ಟಿದ್ದಾರೆ.
