– ನೊಣವಿನಕೆರೆ ಮಠಕ್ಕೆ ಡಿಕೆಶಿ ಭೇಟಿ ಮುಂದೂಡಿಕೆ
ತುಮಕೂರು: ಶಾಸ್ತ್ರದ ಪ್ರಕಾರ ಡಿಕೆ ಶಿವಕುಮಾರ್ (DK Shivakumar) ಅವರು ಸಕಲ ದೋಷ ನೋಡಿಕೊಂಡು ಮುನ್ನಡೆಯಬೇಕಾಗುತ್ತದೆ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ (Kadasiddeshwara Mutt) ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಹಾಗೂ ಮುಂದಿನ ಸಿಎಂ ಡಿಕೆಶಿ ಎನ್ನುವ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ಅಭಿಮಾನಿ ದೇವರು: ಸಿದ್ದರಾಮಯ್ಯ

ಶ್ರೀಮಠದ ಆಶೀರ್ವಾದ ಡಿಕೆಶಿ ಅವರಿಗೆ ಇದ್ದೇ ಇರುತ್ತದೆ. ʻರಾಜಾ ಪ್ರತ್ಯಕ್ಷ ದೇವತಾ…ʼ ಅಂದ್ರೆ ರಾಜ್ಯವನ್ನು ಆಳುವಂತಾ ದೊರೆ ನಾಯಕ. ರೈತರ ಪರ ಬಡವರ ಪರಯಿರುವ ನಾಯಕನಾಗಿ ಹೊರಹೊಮ್ಮುತ್ತಾರೆ. ಶ್ರೀ ಮಠದ ಧರ್ಮದ ಧ್ವಜವನ್ನ ಕೊಟ್ಟು ಅವರಿಗೆ ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡುತ್ತೇನೆ. ಪ್ರಮಾಣವಚನದ ಸಮಯ ನಾವು ಹೇಳಲು ಆಗಲ್ಲ. ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದಾರೆ.
ಡಿಕೆಶಿ ಪ್ರಮಾಣವಚನ ಆಗುವವರೆಗೂ ನಾನು ಮಾತಾನಾಡಬಾರದು ಅಂದುಕೊಂಡಿದ್ದೆ. ಶಾಸ್ತ್ರದ ಪ್ರಕಾರ ಸಕಲ ದೋಷ ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಅವರು ಸಾಧಕನಾಗಿದ್ದಾರೆ. ಮುಂದೆ ಅವರಿಗೆ ಒಳ್ಳೆಯದಾಗಲಿ ಡಿಕೆಶಿಗೆ ಶುಭವಾಗಲಿ. 2 ವರ್ಷ ಅವರು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ಸಮೃದ್ಧ ಜನಸೇವೆ ಮಾಡುವ ʻಧರ್ಮದ ಧ್ವಜʼ ಅವರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಅವರು ಇವತ್ತು ಮಠಕ್ಕೆ ಬರುವ ಬಗ್ಗೆ ಮಾಹಿತಿ ಇಲ್ಲ. ಒಟ್ಟಿನಲ್ಲಿ ಡಿಕೆಶಿ ಅವರಿಗೆ ಫಲ ಸಿಗುತ್ತೆ ಅನ್ನೊ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
ನೊಣವಿನಕೆರೆ ಮಠಕ್ಕೆ ಡಿಕೆಶಿ ಭೇಟಿ ಮುಂದೂಡಿಕೆ
ಡಿಸಿಎಂ ಡಿಕೆ ಶಿವಕುಮಾರ್ ಅವರಿಂದು ನೊಣವಿನಕೆರೆ ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿತ್ತು. ಮಧ್ಯಾಹ್ನ 3 ಗಂಟೆಗೆ ಅಜ್ಜಯ್ಯನ ಪೀಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಕಾದುಕುಳಿತಿದ್ದರು. ಆದ್ರೆ ಡಿಸಿಎಂ ಅವರ ನೊಣವಿನಕೆರೆ ಮಠದ ಭೇಟಿ ಮುಂದೂಡಿಕೆಯಾಗಿದೆ. ಸ್ವಾಮೀಜಿಗಳನ್ನ ಬೆಂಗಳೂರಿನ ಶಾಖಾ ಮಠದಲ್ಲೇ ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.
