ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಮತ್ತು ರಕ್ಷಣೆಗೆ ಕರ್ನಾಟಕ ಸರ್ಕಾರ ಸಹಾಯವಾಣಿ ಬಿಡುಗಡೆ ಮಾಡಿದೆ.
31 ಜಿಲ್ಲೆಗಳಲ್ಲೂ ಎಮರ್ಜೆನ್ಸಿ ಸೆಂಟರ್ಗಳು ಓಪನ್ ಆಗಿದೆ. ಪ್ರವಾಸ, ವೃತ್ತಿ, ಶೈಕ್ಷಣಿಕ ಮೊದಲಾದ ಕಾರಣಗಳಿಗಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿರುವ ಕನ್ನಡಿಗರು ಯುದ್ಧದಿಂದಾಗಿ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ.
![]()

ಕನ್ನಡಿಗರು ಯುದ್ಧಪೀಡಿತ ಭಾಗಗಳಲ್ಲಿ ತಾವು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ತೊಂದರೆಯಲ್ಲಿರುವ ಕನ್ನಡಿಗರಿಗೆ ನೆರವಿನ ಭರವಸೆಯನ್ನು ಸಿಎಂ ನೀಡಿದ್ದಾರೆ. ಎಲ್ಲರ ರಕ್ಷಣೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

