ಕಾರವಾರ: ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಷಿಯನ್ ಮಾದರಿಯ ಮೀನುಗಾರಿಕಾ ಬೋಟ್ (Fishing Boat) ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿದೆ.
ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಬೋಟ್ ಮುಳುಗಡೆಯಾಗಿದೆ. ಸದ್ಯ ಬೋಟ್‌ನಲ್ಲಿದ್ದ 22 ಮೀನುಗಾರರನ್ನು ರಕ್ಷಿಸಲಾಗಿದೆ. ಅಕ್ಕ ಪಕ್ಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: The Love Is Always Louder – ಪ್ರೀತಿ ಪಾಠ ಮಾಡಿದ ನಟಿ ತ್ರಿಶಾ

ಮುದಗಾದ ದಿನೇಶ್ ಕಾಂಚನ್ ಎಂಬವರ ಮಾಲೀಕತ್ವದ ‘ಶ್ರೀ ಅಮ್ಮ’ ಹೆಸರಿನ ಪರ್ಷಿಯನ್ ಬೋಟ್ ಕಾರವಾರದ ಮುದಗಾ ಬಂದರಿನಿಂದ ಒಂದು ವಾರದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಬೋಟ್ ಮುಳುಗಡೆ ಪರಿಣಾಮ ಬೋಟ್ ಹಾಗೂ ಬಲೆ ಸೇರಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದನ್ನೂ ಓದಿ: ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ಆಕ್ರೋಶ

