– ಶಾಲೆಯ ಕಾಂಪೌಂಡ್ ಹಾರಿ ಡಿಸಿ ಕಚೇರಿಗೆ ಬಂದ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ: ತಾಲೂಕಿನ ಪೇರೇಸಂದ್ರದ ಬಳಿ ಇರುವ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕರ ಒಳಜಗಳದಿಂದ (Teachers Internal fight) ವಿದ್ಯಾರ್ಥಿಗಳು ಬೀದಿಗೆ ಬರುವಂತಾಗಿದೆ.
ಹೌದು. ಈ ವಸತಿ ಶಾಲೆಯಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈಗ ಈ ಶಾಲೆಯ ವಿದ್ಯಾರ್ಥಿಗಳು ಪಾಠ ಪ್ರವಚನಗಳನ್ನ ಬಿಟ್ಟು ಬೀದಿಗೆ ಬಂದಿದ್ದಾರೆ. ತಮ್ಮ ಶಾಲೆಯ ಹಿಂದಿ ಶಿಕ್ಷಕ ಡಿ.ದೇವರಾಜುರನ್ನ ಇಲಾಖೆ ಅಮಾನತು ಮಾಡಿದ್ದು, ಮತ್ತೆ ಅವರನ್ನೇ ನಿಯೋಜನೆ ಮಾಡುವಂತೆ ಮನವಿ ಮಾಡಿದ್ದಾರೆ. ವಸತಿ ಶಾಲೆಯ ಕಾಂಪೌಂಡ್ ಹಾರಿ ಬಂದು ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಗೆ (Chikkaballapura DC Office) ಬಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ನನ್ನ ಬಳಿ ಇದೆ – ಸದನದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಬಾಂಬ್

ಇನ್ನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪೆರೇಸಂದ್ರದಲ್ಲಿರುವ ಮುಖ್ಯ ಶಿಕ್ಷಕಿ ಭಾಗ್ಯಮ್ಮ ಪಿತೂರಿ ನಡೆಸಿ, ಶಾಲೆಯ ವಿದ್ಯಾರ್ಥಿನಿಯರಿಗೆ ಗೊತ್ತಿಲ್ಲದಂತೆ ಅವರಿಂದ ಹಿಂದಿ ಶಿಕ್ಷಕನ ವಿರುದ್ಧ ಅಸಭ್ಯ ವರ್ತನೆ ಎಂದು ದೂರು ನೀಡಿ, ನಂತರ ಶಿಕ್ಷಕನ ಅಮಾನತಿಗೆ ಕಾರಣರಾಗಿದ್ದಾರೆಂದು ಆರೋಪಿಸಿದ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕಿ ಭಾಗ್ಯಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಅಮಾನತಾಗಿರುವ ಶಿಕ್ಷಕನನ್ನೇ ನೇಮಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ವಿಬಿ-ಜಿರಾಮ್‌ಜಿ ಕಾಯ್ದೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ – ಸಿಎಂ ಹೇಳಿಕೆಗೆ ಸದನದಲ್ಲಿ ಕೋಲಾಹಲ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಶಿಕ್ಷಕಿ ಭಾಗ್ಯಮ್ಮ, ಏನೂ ಸಮಸ್ಯೆ ಇಲ್ಲ ಸರಿ ಹೋಗಿದೆ ಅಂತ ನುಣುಚಿಕೊಳ್ಳುವ ಪ್ರಯತ್ನ ನಡೆಸಿದರು. ಆದ್ರೆ ಭಾಗ್ಯಮ್ಮ ವಿರುದ್ದ ರೊಚ್ಚಿಗೆದ್ದಿರುವ ವಿದ್ಯಾರ್ಥಿಗಳು ಅನಧಿಕೃತವಾಗಿ ಶಾಲೆಯ ಕಾಂಪೌಂಡ್ ಹಾರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ದೂರು ನೀಡಿದರು. ಕೊನೆಗೆ ಹರಸಾಹಸಪಟ್ಟು ವಿದ್ಯಾರ್ಥಿಗಳನ್ನ ಶಾಲೆಗೆ ಕಳುಹಿಸಿದ್ದು, ವಿದ್ಯಾರ್ಥಿಗಳು ಅಮಾನತಾದ ಶಿಕ್ಷಕರೇ ಬೇಕೆಂದು ಪಟ್ಟು ಹಿಡಿದಿದ್ದಾರೆ.

