Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PWDಯಲ್ಲಿ ಸತೀಶ್ ಕುಟುಂಬಸ್ಥರ ದರ್ಬಾರ್‌, ನೀರಾವರಿಯಲ್ಲಿ ಬೋಸರಾಜು ಮಗ ಹಸ್ತಕ್ಷೇಪ – ಸಿಡಿದ ಗುತ್ತಿಗೆದಾರರ ಸಂಘ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | PWDಯಲ್ಲಿ ಸತೀಶ್ ಕುಟುಂಬಸ್ಥರ ದರ್ಬಾರ್‌, ನೀರಾವರಿಯಲ್ಲಿ ಬೋಸರಾಜು ಮಗ ಹಸ್ತಕ್ಷೇಪ – ಸಿಡಿದ ಗುತ್ತಿಗೆದಾರರ ಸಂಘ

Bengaluru City

PWDಯಲ್ಲಿ ಸತೀಶ್ ಕುಟುಂಬಸ್ಥರ ದರ್ಬಾರ್‌, ನೀರಾವರಿಯಲ್ಲಿ ಬೋಸರಾಜು ಮಗ ಹಸ್ತಕ್ಷೇಪ – ಸಿಡಿದ ಗುತ್ತಿಗೆದಾರರ ಸಂಘ

Public TV
Last updated: April 10, 2025 12:50 pm
Public TV
Share
3 Min Read
Contractors Association lashes out against the government
SHARE

– ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ
– ನೀರಾವರಿ ಇಲಾಖೆಯಲ್ಲಿ ಬಲಾಢ್ಯರಿಗೆ 150 ಕೋಟಿ ಬಿಡುಗಡೆ
– ಸಣ್ಣ ಗುತ್ತಿಗೆದಾರರಿಗೆ 3 ವರ್ಷದಿಂದ ಹಣ ಬಿಡುಗಡೆ ಆಗಿಲ್ಲ

ಬೆಂಗಳೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಈಗ ಸಿಡಿದೆದ್ದಿದೆ. ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಟೇಟ್‌ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ (Contractors’ Association) ಬಾಂಬ್‌ ಸಿಡಿಸಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಧ್ಯವರ್ತಿಗಳ ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೇ ಸ್ಪೆಷಲ್ ಎಲ್‌ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ಸಂಘ ಲೋಕೋಪಯೋಗಿ ಇಲಾಖೆ, ನಾಲ್ಕು ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಣದ ಕೈಗಳ ಬಗ್ಗೆ ಚರ್ಚೆ ಮಾಡಿ ಸಣ್ಣ ಗುತ್ತಿಗೆದಾರರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದಿದೆ. ಇದನ್ನೂ ಓದಿ: ದಾವಣಗೆರೆ | ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ – 12 ಲಕ್ಷ ರೂ. ನಗದಲ್ಲಿ ಅಲಂಕಾರ

Contractors Association lashes out against the karnataka government 1

ಪಬ್ಲಿಕ್‌ ಟಿವಿ ಜೊತೆ ಸಂಘದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬಸ್ಥರು, ನೀರಾವರಿ ಇಲಾಖೆಯಲ್ಲಿ ಬೋಸರಾಜ್‌ (N Boseraju) ಮಗ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಜೊತೆ ಪಬ್ಲಿಕ್‌ ಟಿವಿ ಮಾತನಾಡಿದಾಗ ಅವರು ಹಲವು ವಿಚಾರಗಳನ್ನು ತಿಳಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ : ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಪೇಮೆಂಟ್ ಸಿಗ್ತಿಲ್ಲ. ಎಲ್ಲಾ ಸ್ಪೆಷಲ್ ಎಲ್‌ಒಸಿ. ಸ್ಪೆಷಲ್ ಎಲ್‌ಒಸಿ.. ಜ್ಯೇಷ್ಠತೆ ಆಧಾರದ ಮೇಲೆ ಒಬ್ಬರೂ ಪೇಮೆಂಟ್ ಮಾಡ್ತಿಲ್ಲ. ಪಿಡಬ್ಲ್ಯೂಡಿಯಲ್ಲಿ ಯಾರೋ ಒಬ್ಬ ಕಾಣದ ಕೈ ಇಡೀ ಪಿಡಬ್ಲ್ಯೂಡಿಯನ್ನೇ ಕಂಟ್ರೋಲ್ ಮಾಡ್ತಿದೆ. ನಾಲ್ಕು ನಿಗಮಗಳಲ್ಲಿ ಎಲ್ಲಾ ದೊಡ್ಡ ದೊಡ್ಡವರಿಗೆ ಪೇಮೆಂಟ್ ಮಾಡ್ತಿದ್ದಾರೆ. 5-50 ಲಕ್ಷ ಇರೋರಿಗೆ ಪೇಮೆಂಟ್ ಮಾಡ್ತಿಲ್ಲ.

 

Contractors Association lashes out against the karnataka government 2

ಪ್ರತಿನಿಧಿ: ಯಾರು ಆ ಕಾಣದ ಕೈಗಳು?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಕಾಣದ ಕೈಗಳು ಸಂಬಂಧಿಕರು. ಎಲ್ಲರೂ ಒಬ್ಬೊಬ್ಬರು ಸಂಬಂಧಿಕರನ್ನು ಇಲಾಖೆ ನಡೆಸಿಬಿಟ್ಟರೆ, ಹೆಂಗಾಗುತ್ತೆ.

ಪ್ರತಿನಿಧಿ: ಯಾವ್ಯಾವ ಸಚಿವರು ಸಂಬಂಧಿಕರನ್ನು ಇಟ್ಟುಕೊಂಡಿದ್ದಾರೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಪಿಡಬ್ಲ್ಯೂಡಿ ಸಚಿವರ ಸಂಬಂಧಿಕರು ಕಂಟ್ರೋಲ್ ಇಟ್ಟುಕೊಂಡಿದ್ದಾರೆ. ಎಲ್ಲಾ ಅಧಿಕಾರಿಗಳ ಮೇಲೆ ಅವರೇ ದರ್ಬಾರ್ ಮಾಡ್ತಿದ್ದಾರೆ. ಅಧಿಕಾರಿಗಳಿಗೆ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಯಾರನ್ನು ಕೇಳಬೇಕು?  ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

ಪ್ರತಿನಿಧಿ: ಅವರಿಗೇನು ಕಮೀಷನ್ ಕೊಡಬೇಕಾ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಇಲ್ಲ ಹಂಗತಾ ಅಲ್ಲ. ಉದಾಹರಣೆಗೆ ಸೀನಿಯಾರಿಟಿ ಮೇಲೆ ಪೇಮೆಂಟ್ ಮಾಡಬೇಕು. ಆದ್ರೆ ಇವರು ಹಂಗಲ್ಲ, ಎಲ್ಲಾ ಎಲ್‌ಒಸಿ. ಸ್ಪೆಷಲ್ ಎಲ್‌ಒಸಿ ಯಾಕೆ ಇಂಟ್ರಡ್ಯೂಸ್ ಮಾಡಿದ್ರು. ಮೇಲೆ ಪೇಮೆಂಟ್ ಮಾಡ್ತಿದ್ದಾರೆ.

ಪ್ರತಿನಿಧಿ: ಸಂಬಂಧಿಕರು ಹೇಗೆ ಕಂಟ್ರೋಲ್ ಮಾಡ್ತಿದ್ದಾರೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ನಾವು ಸೆಕ್ರೆಟರಿ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಒಎಸ್‌ಸಿ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಆಮೇಲೆ ಐಎಫ್‌ಎ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ನಾವು ಯಾರನ್ನು ಕೇಳಬೇಕು.

ಪ್ರತಿನಿಧಿ: ನೀರಾವರಿ ಇಲಾಖೆಯಲ್ಲಿ ಏನಾಗ್ತಿದೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಎಂಡಿಗಳು ಬರೀ ಬಲಾಡ್ಯರಿಗೆ ಕೊಡ್ತಿದ್ದಾರೆ. ದೊಡ್ದವರಿಗೆ 100 ಕೋಟಿ, 200 ಕೋಟಿ ಯಾರಿಗೆ ಕೊಡ್ತಾರೆ ಅನ್ನೋದೇ ಗೊತ್ತಾಗಲ್ಲ. 5 ರಿಂದ 50 ಕೋಟಿ ಬಾಕಿ ಇರುವವರು 60% ಇದ್ದಾರೆ. ಅವರಿಗೆ ಪೇಮೆಂಟ್ ಕೊಡಬೇಕು. 3 ವರ್ಷದಿಂದ ಒದ್ದಾಡುತ್ತಿದ್ದಾರೆ. ಎರಡು ಏನು? ಬೋಸರಾಜು ಮಗ ಹಸ್ತಕ್ಷೇಪ ಮಾಡ್ತಿದ್ದಾರೆ. ಅವರು ಯಾಕೆ ಬರಬೇಕು?

ಪ್ರತಿನಿಧಿ: ಸರ್ಕಾರದ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಇದ್ಯಾ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಹೌದು ಡೆಫನೇಟ್ಲಿ. 100% ಇಷ್ಟ ಬಂದವರಿಗೆ ಹಣ ಬಿಡುಗಡೆ ಮಾಡ್ತಿದ್ದಾರೆ ? ಒಂದು ರೀತಿ ನೀತಿ ಇಲ್ಲ. ಹಳೇ ಕಾಲದ್ದು ಎಲ್‌ಒಸಿ ಬಿಡುಗಡೆ ವೇಳೆ, ಹಳೇ ಕಾಲದ್ದಕ್ಕಿಂದ ಹೆಚ್ಚು ಪೇಮೆಂಟ್ ಕಲೆಕ್ಟ್ ಮಾಡ್ತಿದ್ದಾರೆ. ಯಾಕೆ? ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಪೇಮೆಂಟ್ ಕಲೆಕ್ಟ್ ಮಾಡ್ತಿದ್ದಾರೆ.

ಪ್ರತಿನಿಧಿ: ಎಷ್ಟು ಪೇಮೆಂಟ್ ಕಲೆಕ್ಟ್ ಮಾಡ್ತಾರೆ..?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಅದನ್ನ ಆಮೇಲೆ ಹೇಳ್ತಿವಿ.. ಈಗ ನಾವು ಎಲ್ಲಾ ಸರಿ ಆಗಬೇಕು ಅನ್ನೋದಷ್ಟೆ ನಮ್ಮ ಉದ್ದೇಶ. ಜಟಿಲ ಆಗಬಾರದು. ಮುಂದೆ ಸರಿಯಾಗದಿದ್ದರೆ, ಎಲ್ಲಾ ಬಹಿರಂಗವಾಗಿ ಹೇಳ್ತಿವಿ.

TAGGED:contractorirrigationpwdಕರ್ನಾಟಕಗುತ್ತಿಗೆದಾರರುನೀರಾವರಿಭ್ರಷ್ಟಾಚಾರ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

vinay kulkarni daughters
Dharwad

ಜೈಲಲ್ಲಿರೋ ತಂದೆ ವಿನಯ್‌ ಕುಲಕರ್ಣಿ ನೆನೆದು ಫೋಟೊ ಜೊತೆ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮಕ್ಕಳು

Public TV
By Public TV
14 minutes ago
Modi 1
Latest

ಕಾಂಗ್ರೆಸ್‌ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ

Public TV
By Public TV
29 minutes ago
Chamarajanagara
Chamarajanagar

ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರ ಹೋರಾಟಕ್ಕೆ ಜಯ – 21 ಮಂದಿಗೆ ಸರ್ಕಾರಿ ಕೆಲಸ

Public TV
By Public TV
54 minutes ago
stop rape
Crime

ಕಾಡಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‌ ಆರೋಪ – ಧರ್ಮಸ್ಥಳ ಪೊಲೀಸರಿಂದ ಇಬ್ಬರ ಬಂಧನ

Public TV
By Public TV
2 hours ago
kalaburagi police
Kalaburagi

ಕಲಬುರಗಿ| ವಾಹನ ಡಿಕ್ಕಿ ಹೊಡೆದು ಪೊಲೀಸ್‌ ಕಾನ್‌ಸ್ಟೆಬಲ್‌ ಸಾವು

Public TV
By Public TV
2 hours ago
Ajit Agarkar
Cricket

2027 ರ ಏಕದಿನ ವಿಶ್ವಕಪ್‌ ವರೆಗೆ ಅಜಿತ್‌ ಅಗರ್ಕರ್‌ ಟೀಂ ಇಂಡಿಯಾ ಆಯ್ಕೆ ಮುಖ್ಯಸ್ಥ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?