Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 45 ನೌಕರರನ್ನು ವಜಾ ಮಾಡಿದ ನಿರಾಣಿ ಶುಗರ್ಸ್ ಕಂಪನಿ – ಚಿಮಿನಿ ಏರಿದ ನೌಕರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | 45 ನೌಕರರನ್ನು ವಜಾ ಮಾಡಿದ ನಿರಾಣಿ ಶುಗರ್ಸ್ ಕಂಪನಿ – ಚಿಮಿನಿ ಏರಿದ ನೌಕರ

Districts

45 ನೌಕರರನ್ನು ವಜಾ ಮಾಡಿದ ನಿರಾಣಿ ಶುಗರ್ಸ್ ಕಂಪನಿ – ಚಿಮಿನಿ ಏರಿದ ನೌಕರ

Public TV
Last updated: February 17, 2025 6:50 pm
Public TV
Share
3 Min Read
Mandya 4
SHARE

ಮಂಡ್ಯ: 5 ವರ್ಷಗಳ ಹಿಂದೆ ನಷ್ಟದ ನೆಪವೊಡ್ಡಿದ ಸರ್ಕಾರ ಜಿಲ್ಲೆಯ ಪಾಂಡವಪುರದ PSSK ಸಹಕಾರಿ ಸ್ವಾಮ್ಯದ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಯನ್ನ (Sugar factory )ಖಾಸಗೀಕರಣಗೊಳಿಸಿತ್ತು. ಆರಂಭದಲ್ಲಿ ನೌಕರರನ್ನ ಕೆಲಸದಿಂದ ವಜಾ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಆಡಳಿತ ಮಂಡಳಿ, ಇದೀಗ ನೌಕರರನ್ನು ಕಿತ್ತು ಬೀಸಾಕಿದೆ. ಕಂಪನಿಯ ನಿರ್ಧಾರ ಖಂಡಿಸಿ ಕಾರ್ಖಾನೆಯ ಚಿಮಿನಿ ಏರಿರುವ ಕಾರ್ಮಿಕ ಮತ್ತೆ‌ ಕೆಲಸಕ್ಕೆ ಸೇರಿಕೊಳ್ಳುವಂತೆ ವಿನೂತನ ಪ್ರತಿಭಟನೆ ಮಾಡ್ತಿದ್ದಾನೆ. ಆತನನ್ನು ಕೆಳಗಿಳಿಸಲು ಅಧಿಕಾರಿಗಳು ಹಾಗೂ ಕಾರ್ಖಾನೆ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.

Mandya 2 1

ಚಿಮಿನಿ ಏರಿ ಕುಳಿತ ವ್ಯಕ್ತಿ, ಆ ವ್ಯಕ್ತಿ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಜನರು. ಈ ದೃಶ್ಯ ಕಂಡು ಬಂದದ್ದು, ಮಂಡ್ಯದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ. ಕೆಲಸದಿಂದ ವಜಾಗೊಳಿಸಿದ್ರು ಅನ್ನೋ‌ ಕಾರಣಕ್ಕೆ ಚಿಮಿನಿ ಏರಿದ್ದ ನೊಂದ ಕಾರ್ಮಿಕ ರಾಮಕೃಷ್ಣ ಆಡಳಿತ ಮಂಡಳಿಯ ನಿರ್ಧಾರವನ್ನು ವಿನೂತನವಾಗಿ ಖಂಡಿಸಿದ್ರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ

ಅಂದಹಾಗೇ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಒಂದು ಕಾಲದಲ್ಲಿ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿತ್ತು. ಕಳೆದ 5 ವರ್ಷಗಳ ಹಿಂದೆ ಅಂದಿನ ಸರ್ಕಾರ ನಷ್ಟದ ಕಾರಣ ಹೇಳಿ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಸಂಸ್ಥೆಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು‌. ಗುತ್ತಿಗೆ ಕರಾರು ವೇಳೆ PSSK ನೌಕರರನ್ನ ಮುಂದುವರಿಸುವಂತೆ ಹಾಗೂ ನೌಕರರು ಒಪ್ಪಿದ್ದಲ್ಲಿ VRS ನೀಡುವಂತೆ ಸೂಚಿಸಲಾಗಿತ್ತು. ಆರಂಭದಲ್ಲಿ ನಿಯಮ ಪಾಲಿಸುವುದಾಗಿ ಹೇಳಿದ್ದ ನಿರಾಣಿ ಶುಗರ್ಸ್‌ನವರು ಕಾಲ ಕಳೆದಂತೆ ಒಂದೊಂದೇ ಒಪ್ಪಂದಗಳನ್ನ ಬ್ರೇಕ್ ಮಾಡ್ತಾ ಬರ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕಳೆದ ಹತ್ತಾರು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ 45 ಜನ ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ. ಇದರಿಂದ ಕಾರ್ಖಾನೆ ಉದ್ಯೋಗ ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬಗಳೀಗ ಬೀದಿಗೆ ಬಿದ್ದಂತಾಗಿದೆ.

ಕಾರ್ಖಾನೆ ಆಡಳಿತ ಮಂಡಳಿ ನಿರ್ಧಾರ ವಿರುದ್ಧ ಕಳೆದ ಒಂದೂವರೆ ತಿಂಗಳಿನಿಂದ ವಜಾಗೊಂಡ ನೌಕರರು ಕಾರ್ಖಾನೆ ಆವರಣದಲ್ಲೇ ಉದ್ಯೋಗಕ್ಕಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.‌ ಪ್ರತಿಭಟನಾನಿರತ ನೌಕರರ ಸಂಕಷ್ಟಕ್ಕೆ ನಿರಾಣಿ ಶುಗರ್ಸ್‌ನವರು ಕ್ಯಾರೆ ಅಂತಿಲ್ಲ. ಇದರಿಂದ ಮನನೊಂದ ರಾಮಕೃಷ್ಣ ಎಂಬ ನೌಕರನೊಬ್ಬ ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಕಾರ್ಖಾನೆಯ ಚಿಮಿನಿ ಏರಿ ವಿನೂತನ ಹೋರಾಟಕ್ಕೆ ಮುಂದಾಗಿದ್ದಾನೆ. ಮತ್ತೆ ಕೆಲಸಕ್ಕೆ ಪಡೆಯುವವರೆಗೂ ಕೆಳಗೆ ಇಳಿಯಲ್ಲ ಎಂದು ಹಠ ಹಿಡಿದು ಕುಳಿತಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿಗಳ 13.4 ಲಕ್ಷ ಹೆಚ್ಚುವರಿ ಶುಲ್ಕ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ

ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿ ವರ್ಗ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ರು. ಈ ವೇಳೆ ಚಿಮಿನಿ ಏರಿರುವ ನೌಕರ ರಾಮಕೃಷ್ಣನ ಮನವೊಲಿಸಿ, ಕೆಳಗಿಳಿಸುವ ಪ್ರಯತ್ನ ಮಾಡಿದ್ರು, ಆತ ಪಟ್ಟು ಬಿಡಲಿಲ್ಲ. ತಹಶಿಲ್ದಾರ್ ಸಂತೋಷ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ವಜಾಗೊಂಡ ನೌಕರರ ಜೊತೆ ಸಭೆ ನಡೆಸಿದ್ರು. ಕೋರ್ಟ್ ಆದೇಶ ಉಲ್ಲಂಘಿಸಿ ನೌಕರರನ್ನು ಕೆಲಸದಿಂದ ತೆಗೆದಿರುವ ಬಗ್ಗೆ ಆಡಳಿತ ಮಂಡಳಿಯನ್ನ ತಹಶಿಲ್ದಾರ್ ಮತ್ತು ಸ್ಥಳೀಯ ಮುಖಂಡರು ತರಾಟೆ ತೆಗೆದುಕೊಂಡ್ರು. ಬೇಡಿಕೆ ಈಡೇರಿಸಿ ಚಿಮಿನಿ ಏರಿದ ನೌಕರನನ್ನ ಕೆಳಗಿಳಿಸುವಂತೆ ಸೂಚಿಸಿದ್ರು.

ಕಾರ್ಖಾನೆ ಆವರಣದಲ್ಲಿ ಆತಂಕದ ವಾತಾವರಣ ಮನೆಮಾಡಿದ್ರೆ. ನಿರಾಣಿ ಶುಗರ್ಸ್ ಕಂಪನಿಯ ಮೊಂಡಾಟ ವಜಾಗೊಂಡ ನೌಕರರ ನೋವಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಿದೆ. ಇನ್ನಾದರು ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಗ್ಯಾರಂಟಿಗಳಿಗೆ ಮೀಸಲಿಟ್ಟ ಹಣ ಯಾರು ನುಂಗುತ್ತಿದ್ದಾರೆ? – ರಾಜ್ಯ ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

TAGGED:mandyaNirani Sugars CompanySugar factory Employeesನಿರಾಣಿ ಶುಗರ್ಸ್ ಕಂಪನಿಮಂಡ್ಯಸಕ್ಕರೆ ಕಾರ್ಖಾನೆ ನೌಕರರು
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

West Bengal Election Election elephant appeared at a booth in the Jangalmahal forest region during the first phase of voting
Latest

West Bengal Election | ಮತದಾನ ಆರಂಭವಾಗುವ ಮೊದಲೇ ಮತಗಟ್ಟೆಗೆ ಆಗಮಿಸಿದ ಆನೆ!

Public TV
By Public TV
6 minutes ago
G Parameshwar 1
Bengaluru City

ಕಬಡ್ಡಿ ಬೆಟ್ಟಿಂಗ್ ಕೇಸ್‌ನಲ್ಲಿ ಪರಮೇಶ್ವರ್‌ಗೆ ಬಿಗ್ ರಿಲೀಫ್ – FIR ದಾಖಲಿಸದಂತೆ ಹೈಕೋರ್ಟ್ ತಡೆ

Public TV
By Public TV
9 minutes ago
SSLC Results Chikkodis Prathana who studied in a government school secured first place in Karnataka
Belgaum

SSLC Results| ಸರ್ಕಾರಿ ಶಾಲೆಯಲ್ಲಿ ಓದಿದ ಚಿಕ್ಕೋಡಿಯ ಪ್ರಾರ್ಥನಾ ರಾಜ್ಯಕ್ಕೆ ಫಸ್ಟ್‌

Public TV
By Public TV
32 minutes ago
kea
Bengaluru City

ಸಿಇಟಿ ಪರೀಕ್ಷೆಯ ಮೊದಲ ದಿನ 96% ಹಾಜರಾತಿ – ಕೊನೆಕ್ಷಣದಲ್ಲಿ ಬಂದವರಿಗೂ ಬರೆಯಲು ಅವಕಾಶ: KEA

Public TV
By Public TV
34 minutes ago
tirupati father kills wife and mother dies by suicide with children
Crime

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆ ಕೊಟ್ಟ ವ್ಯಕ್ತಿ

Public TV
By Public TV
51 minutes ago
india china map
Latest

ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭಿಸಲು ಕೇಂದ್ರ ಸರ್ಕಾರ ಸಿದ್ಧತೆ

Public TV
By Public TV
57 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?