ಸನ್ನಿ ಲಿಯೋನ್ ಗೆ ಆತಂಕ ಮೂಡಿಸಿದ ಬಾಂಬ್ ಸ್ಫೋಟ

Public TV
1 Min Read
sunny leone 2

ಬಾಲಿವುಡ್ ನ ಹಾಟ್ ತಾರೆ ಸನ್ನಿ ಲಿಯೋನ್ ಪಾಲ್ಗೊಳ್ಳಬೇಕಿದ್ದ ಫ್ಯಾಷನ್ ಶೋ ಕಾರ್ಯಕ್ರಮದ ಸಮೀಪದಲ್ಲೇ ಬಾಂಬ್ ಸ್ಪೋಟವಾಗಿ ಆತಂಕ ಸೃಷ್ಟಿಯಾಗಿದೆ. ಇಂದು ಸನ್ನಿ ಲಿಯೋನ್ ಮಣಿಪುರದ ರಾಜಧಾನಿ ಹಟ್ಟಾ ಕಾಂಗ್ಜೆಬುಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಅಷ್ಟರಲ್ಲೇ ಈ ಸ್ಫೋಟ ಸಂಭವಿಸಿ ಆತಂಕ ಮೂಡಿಸಿದೆ.

sunny leone

ಸ್ಫೋಟ ಸಂಭವಿಸಿದ ಕುರಿತು ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದು, ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಸನ್ನಿ ಲಿಯೋನ್ ಭಾಗಿಯಾಗಬೇಕಿದ್ದ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಅದು ಪ್ರಬಲ ಸ್ಫೋಟವಾದ್ದರಿಂದ ಕೂಡಲೇ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತು ಕಟ್ಟೆಚ್ಚರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

sunny

ಈ ಘಟನೆಯಿಂದ ಯಾವುದೇ ರೀತಿಯ ಜೀವಹಾನಿ ಯಾಗಿಲ್ಲವೆಂದು ತಿಳಿದು ಬಂದಿದ್ದು, ಸಂಬಂಧಿಸಿದ ಘಟನೆ ಕುರಿತಂತೆ ಶೋಧ ಕಾರ್ಯ ಮುಂದುವರೆದಿದೆ. ಫ್ಯಾಷನ್ ಶೋ ಆಯೋಜಕರು ಸನ್ನಿ ಲಿಯೋನ್ ಅವರಿಗೆ ಈ ಮಾಹಿತಿ ನೀಡಿದ್ದು, ತಮ್ಮ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲವೆಂದು ತಿಳಿಸಿದ್ದಾರೆ. ಅಲ್ಲದೇ ಭದ್ರತೆಯನ್ನು ಹೆಚ್ಚಿಸಿರುವ ಕುರಿತು ಮಾಹಿತಿಯನ್ನು ಅವರು ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *