ಬೆಂಗಳೂರು: ನೇಪಾಳದ ಮಹಾದುರಂತದಲ್ಲಿ (Nepal Flood) 8 ಜನ ಕನ್ನಡಿಗರು (Kannadigas) ನಾಪತ್ತೆಯಾಗಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ (G Parameshwar) ಹೇಳಿದ್ದಾರೆ.
ಇಶಾ ಫೌಂಡೇಷನ್ ಜೊತೆ ಕೈಲಾಸ ಮಾನಸಸರೋವರ ಯಾತ್ರೆಗೆ ಹೋಗಿದ್ದ ಬೆಂಗಳೂರು ಮೂಲದ ಅಮೆರಿಕದ ವರ್ಜೀನಿಯಾ ನಿವಾಸಿಗಳಾದ ಶ್ರೀನಿವಾಸ್ ಸುಧೀರ್, ಸುಧೀಂದ್ರ, ಲಕ್ಷ್ಮಿನಾಥ್ ಗೋಪಿಶೆಟ್ಟಿ, ವೆಂಕಟ್ ಬೆಂಗಳೂರು, ಕೇಶವರಾವ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಲ್ಲದೇ ಧಾರವಾಡದ ಮೂಲದ ಆಸ್ಟ್ರೇಲಿಯಾ ನಿವಾಸಿ ರಾಕೇಶ್ ನಾಯಕ್ ಕಣ್ಮರೆಯಾಗಿದ್ದಾರೆ. ಇಶಾ ಫೌಂಡೇಷನ್‌ನಿಂದ ಕೈಲಾಸ ಪರ್ವತ ನೋಡಲು ಹೋಗಿದ್ದಾರೆ. ಮಗ ಸುರಕ್ಷಿತವಾಗಿ ಬರುತ್ತಾನೆ ಎಂದು ಪೋಷಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಾವೇರಿ | ಕಾಡುಹಂದಿ ಕಾಟ ತಪ್ಪಿಸಲು ಇಟ್ಟಿದ್ದ ನಾಡಬಾಂಬ್ ಸ್ಫೋಟ; ಮೂರು ಪ್ರಾಣಿ ಬಲಿ
ಇನ್ನು, ಕಲಬುರಗಿಯ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ, ಸಂಗಮೇಶ್ ಕನಕಪುರ ಇಬ್ಬರು ಸುರಕ್ಷಿತವಾಗಿದ್ದಾರೆ. ಹೈದರಾಬಾದ್‌ನ 23 ಜನರ ಜೊತೆ ಸೇರಿ ಇವರಿಬ್ಬರೂ ಆಗಸ್ಟ್ 21ರಂದು ನೇಪಾಳಕ್ಕೆ ಹೋಗಿದ್ದರು. ಮಲ್ಲಿನಾಥ ಎದುರಿಗೆ ಭೀಕರ ಪ್ರಳಯ ಸಂಭವಿಸಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಮಲ್ಲಿನಾಥ್ ಪಾರಾಗಿದ್ದಾರೆ. ಕನ್ನಡಿಗರ ಸುರಕ್ಷತೆಗೆ ಸಿಎಂ ಡಿಕೆಶಿ ಸಕಲ ಕ್ರಮ ಕೈಗೊಂಡಿರೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದವರ ವಿರುದ್ಧ ಕೇಸ್ ದಾಖಲು – ಓರ್ವ ಬಂಧನ
ಈ ಕುರಿತು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ನೇಪಾಳ ಪ್ರವಾಹದಲ್ಲಿ ಬೆಂಗಳೂರಿನವರು 8 ಜನ ಸಿಲುಕಿದ್ದಾರೆ. ಸತ್ತವರ ಮಾಹಿತಿ ಇಲ್ಲ. ನಾಪತ್ತೆಯಾದವರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ನೇಪಾಳ ಪ್ರವಾಹದಲ್ಲಿ ಸಿಲುಕಿದವರು 1070-080-22253707 ನಂಬರ್‌ಗೆ ಸಂಪರ್ಕ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ನಮ್ಮ ದೇಶಕ್ಕೇ ಚಿನ್ನದ ಮೊಟ್ಟೆ ಇಡುವ ಕೋಳಿ, ಇನ್ನಷ್ಟು ಸುಧಾರಣೆ ಮಾಡಬೇಕು: ಕೃಷ್ಣ ಬೈರೇಗೌಡ
ಕಾಠ್ಮಂಡುಗೆ ಒಬ್ಬ ಸೀನಿಯರ್ ಆಫಿಸರನ್ನ ಕಳುಹಿಸುತ್ತೇವೆ. ಚೈನಿಸ್ ಎಂಬೆಸಿ ಟಿಬೆಟಿಯನ್ ಅಧಿಕಾರಿಗಳ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದೇವೆ. ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರದ ಮಾಹಿತಿ ಮತ್ತು ಕುಟುಂಬದ ಮಾಹಿತಿ ಆಧರಿಸಿ 8 ಜನ ಎಂದು ಗೊತ್ತಾಗಿದೆ. ಸಿಎಂ ಜೊತೆ ಚರ್ಚೆ ಮಾಡಿ ಅಗತ್ಯ ಇದ್ದರೆ ಸಚಿವರನ್ನು ಸಹ ಕಳುಹಿಸುತ್ತೇವೆ ಎಂದರು. ಇದನ್ನೂ ಓದಿ: Nepal Flood Horror | ಕಠ್ಮಂಡುವಿನಿಂದ 40 ಖಾಸಗಿ ಹೆಲಿಕಾಪ್ಟರ್ ಬಳಸಿ ಪರಿಹಾರ ಸಾಮಗ್ರಿ ಸಾಗಾಟ
ಇನ್ನು, ಕೇಂದ್ರ ವಿದೇಶಾಂಗ ಸಚಿವಾಲಯ ಸುದ್ದಿಗೋಷ್ಠಿ ನಡೆಸಿ, 288 ಜನ ಸಂಪರ್ಕಕ್ಕೆ ಸಿಗುತ್ತಿಲ್ಲ. ಟಿಬೇಟ್‌ನಲ್ಲಿರುವ 200 ಜನ ಸಹಾಯ ಕೋರಿದ್ದಾರೆ. ತಮಿಳುನಾಡಿನ 21 ಜನರನ್ನು ರಕ್ಷಿಸಲಾಗಿದೆ ಅಂದಿದೆ. ನೇಪಾಳದ ಜೊತೆ ಭಾರತವೂ ಹೆಗಲಿಗೆ ಹೆಗಲುಕೊಟ್ಟು ನಿಂತಿದೆ. ನಾವು ಮತ್ತಷ್ಟು ನೆರವನ್ನೂ ಕೊಡುತ್ತೇವೆ ಅಂದಿದೆ. ತ್ರಿಶೂಲಿ ಪವರ್ ಪ್ರಾಜೆಕ್ಟ್ನಲ್ಲಿದ್ದ 67 ಕಾರ್ಮಿಕರು, ಮಹಾರಾಷ್ಟçದ 80, ಕೇರಳ 33, ಪಶ್ಚಿಮ ಬಂಗಾಳ 32, ಆಂಧ್ರ ಪ್ರದೇಶದ 28, ತಮಿಳುನಾಡು 37 ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಬಂಡುಕೋರರ ಅಟ್ಟಹಾಸ – ವಾಹನದ ಮೇಲೆ ದಾಳಿ, ನಾಲ್ವರು ನಾಗರಿಕರು ಬಲಿ
82 ಭಕ್ತರನ್ನು ಕಳೆದುಕೊಂಡಿರುವ ಸದ್ಗುರು ಜಗ್ಗಿವಾಸುದೇವ್ ಅವರು ಕಣ್ಣೀರು ಹಾಕಿದ್ದು, ಟಿಬೇಟ್‌ನ ಗೈರಾಂಗ್ ಪ್ರದೇಶಕ್ಕೆ ಭೇಟಿಗೆ ಅನುಮತಿ ಕೇಳಿದ್ದಾರೆ. ಈ ಮಧ್ಯೆ, ಬಿಹಾರ, ಉತ್ತರ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ನೇಪಾಳ ಪ್ರವಾಹದಿಂದ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ 2 ರಾಜ್ಯಗಳ ಗಂಡಕ್ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಹಾರದ ನದಿಪಾತ್ರದಲ್ಲಿ 5,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಉತ್ತರ ಪ್ರದೇಶದ ಗಂಡಕ್ ಡ್ಯಾಮ್‌ನ 36 ಗೇಟ್ ಓಪನ್ ಮಾಡಿ ಗಂಡಕ್ ನದಿಗೆ ನೀರು ಬಿಡಲಾಗುತ್ತಿದೆ. ಮಹಾರಾಜ್‌ಗಂಜ್, ಖುಷಿನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: ದೇಶಾದ್ಯಂತ 41 ಅಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಮುಂದಾದ ಕೇಂದ್ರ; 579 ಕೇಂದ್ರಗಳಲ್ಲಿ ಮೇಲ್ವಿಚಾರಣೆಗೆ ಜೋಶಿ ನಿರ್ದೇಶನ
